ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.14: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಶ್ರೀ ಉತ್ಸವಾಂಬ ದೇವಸ್ಥಾನಕ್ಕೆ ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಫೆ.16ರಿಂದ ಫೆ.17ರವರೆಗೆ ಸಾರ್ವಜನಿಕರು ಮತ್ತು ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿಗಳ ಆದೇಶದಂತೆ ಹಾಗೂ ಸಾರ್ವಜನಿಕರು ಹಾಗೂ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಹಾಗೂ ಓಮಿಕ್ರೋನ್ ಸಾಂಕ್ರಾಮಿಕ ರೋಗವನ್ನು ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಫೆ.16 ಮತ್ತು 17ರಂದು ಉತ್ಸವಾಂಬ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮತ್ತು ಭಕ್ತಾಧಿಗಳಿಗೆ ನೀರು, ಬೆಳಕು ಮತ್ತು ಶೌಚಾಲಯಗಳ ಇನ್ನಿತರ ಮೂಲಭೂತ ಸೌಕರ್ಯಗಳು ಇರುವುದಿಲ್ಲ ಮತ್ತು ಉಚ್ಚಂಗಿದುರ್ಗದ ಗುಡ್ಡದ ಮೇಲೆ ಮತ್ತು ಕೆಳಗಡೆ ಪಾದಗಟ್ಟೆ ಹತ್ತಿರ, ಹಾಲಮ್ಮ ತೋಪಿನ ಸುತ್ತ-ಮುತ್ತಲಿನ ಹೊಲಗಳಲ್ಲಿ ಭಕ್ತಾಧಿಗಳಿಗೆ ತಂಗಲು ಅವಕಾಶ ಇರುವುದಿಲ್ಲ ಮತ್ತು ಎತ್ತಿನ ಬಂಡಿ, ಬೈಕ್, ಕಾರು ಮತ್ತು ಬಸ್ ಹಾಗೂ ಇತರ ವಾಹನಗಳಿಗೆ ಹಾಗೂ ಸಾರ್ವಜನಿಕರು/ಭಕ್ತಾದಿಗಳಿಗೆ ಫೆ.16ರಿಂದ ಫೆ.17ರವರೆಗೆ ಉಚ್ಚಂಗಿದುರ್ಗಕ್ಕೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿರುವ ಅವರು ಭಕ್ತಾದಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.