ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್ ವುಡ್ ನ ಸಿನಿಮಾ‌ ನಿರ್ದೇಶಕ ಸಿಸಿಬಿ ಬಲೆಗೆ!

ಬೆಂಗಳೂರು: ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ‌ ನಿರ್ದೇಶಕನನ್ನ ಸಿಸಿಬಿ ಅರೆಸ್ಟ್ ಮಾಡಿದೆ. ಸ್ಯಾಂಡಲ್ ವುಡ್ ಸಿನಿ ನಿರ್ದೇಶಕ ಗಜೇಂದ್ರ @ ಗಜ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪೊಲೀಸರ…

ಬೆಂಗಳೂರು: ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ‌ ನಿರ್ದೇಶಕನನ್ನ ಸಿಸಿಬಿ ಅರೆಸ್ಟ್ ಮಾಡಿದೆ. ಸ್ಯಾಂಡಲ್ ವುಡ್ ಸಿನಿ ನಿರ್ದೇಶಕ ಗಜೇಂದ್ರ @ ಗಜ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಪೊಲೀಸರ ಕೈಗೆ ಸಿಗದೇ ಗಜೇಂದ್ರ ಒಡಾಡಿಕೊಂಡಿದ್ದ. 2004 ರಲ್ಲಿ ನಡೆದಿದ್ದ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಶೀಟರ್ ಕೊತ್ತರವಿ ಮರ್ಡರ್ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆಗಿದ್ದ. ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರಲಿಲಲ್ಲ.

ಈತ ಅರಸಯ್ಯನ ಶಿಷ್ಯ ಗಜೇಂದ್ರ, ಗಜ, ಪುಟಾಣಿ ಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಗಜ ಹೇಳಿಕೊಂಡಿದ್ದ. ಸದ್ಯ ಸಿಸಿಬಿ ಪೊಲೀಸ್ರು ಗಜೇಂದ್ರನನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.