ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಅಂತೆಯೇ ಇದೀಗ ರೈತರ ಆದಾಯ ಹೆಚ್ಚಳದ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಒಟ್ಟು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 2ರಂದು 14 ಸಾವಿರ ಕೋಟಿ ರೂ. ವೆಚ್ಚದ 7 ಬೃಹತ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಯೋಜನೆಗಳ ಪಟ್ಟಿ ಇಲ್ಲಿವೆ :
ಬೆಳೆ ವಿಜ್ಞಾನ ಯೋಜನೆ (3979 ಕೋಟಿ ರು.)
ಡಿಜಿಟಲ್ ಕೃಷಿ ಮಿಷನ್ (2817 ಕೋಟಿ ರು.)
ಕೃಷಿ ಶಿಕ್ಷಣ, ನಿರ್ವಹಣೆ ಹಾಗೂ ಸಾಮಾಜಿಕ ವಿಜ್ಞಾನ ಕಾರ್ಯಕ್ರಮ (2291 ಕೋಟಿ ರು.)
ಸುಸ್ಥಿರ ಜಾನುವಾರು ಆರೋಗ್ಯ ಹಾಗೂ ಉತ್ಪಾದನೆ ಯೋಜನೆ (1702 ಕೋಟಿ ರು.)
ತೋಟಗಾರಿಕೆ ಸುಸ್ಥಿರ ಅಭಿವೃದ್ಧಿ (860 ಕೋಟಿ ರು.)
ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆ (1202 ಕೋಟಿ ರು.)
ನೈಸರ್ಗಿಕ ಸಂಪನ್ಮೂಲ ನಿರ್ವಹಣೆ (1115 ಕೋಟಿ ರು.)
ಈ ಮೇಲಿನ 7 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳ ಒಟ್ಟಾರೆ ವೆಚ್ಚ 13966 ಕೋಟಿ ರೂ. ಆಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕುರಿತು ಮಾತನಾಡಿ ಈ ಸಮಗ್ರ ಕೃಷಿ ಯೋಜನೆಗಳು ರೈತರ ಆದಾಯ ಹೆಚ್ಚಳ ಮಾಡುವ ಗುರಿಯನ್ನು ಹೊಂದಿವೆ. ಸಂಶೋಧನೆ ಮತ್ತು ಶಿಕ್ಷಣ, ಹವಾಮಾನ ಬದಲಾವಣೆಯಿಂದ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿ ವಲಯದ ಡಿಜಿಟಲೀಕರಣ ಹಾಗೂ ತೋಟಗಾರಿಕೆ ಮತ್ತು ಜಾನುವಾರು ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದು ಈ ಕಾರ್ಯಕ್ರಮಗಳ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.