ಸೈಬರ್ ಸೆಕ್ಯುರಿಟಿ ಕುರಿತು ಮೂರು ದಿನಗಳ ಕಾರ್ಯಾಗಾರ

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ವತಿಯಿಂದ “Cyber Security and Internet Safety” ವಿಷಯದ ಕುರಿತು ಫೆ.5 ರಿಂದ 7 ವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಅಕಾಡಮಿಯ ಬೆಂಗಳೂರು ಕಚೇರಿಯಲ್ಲಿ ಆಯೋಜಿಸಲಾಗಿದೆ.…

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ವತಿಯಿಂದ “Cyber Security and Internet Safety” ವಿಷಯದ ಕುರಿತು ಫೆ.5 ರಿಂದ 7 ವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಅಕಾಡಮಿಯ ಬೆಂಗಳೂರು ಕಚೇರಿಯಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ “Cyber Security and Internet Safety”  ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಭಾಗವಹಿಸಲಿದ್ದಾರೆ. 

ಆಸಕ್ತ ಪ್ರತಿನಿಧಿಗಳು ಫೆ.3 ರೊಳಗಾಗಿ (Google form- https://forms.gle/9Fds6N5vjzLpjNGX7)  ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವೈಜ್ಞಾನಿಕಾಧಿಕಾರಿ ಶ್ರೀನಿವಾಸ ಮೊ ಸಂಖ್ಯೆ; 9620767819, ಚಂದ್ರಶೇಖರಮೂರ್ತಿ ಮೊ:9686449019 ನ್ನು ಅಥವಾ ಅಕಾಡೆಮಿಯ ವೆಬ್ ಸೈಟ್ https://kstacademy.in  ವೀಕ್ಷಿಸಬಹುದೆಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.