This is a Cab, Not Your Private Place: ಕ್ಯಾಬ್ ಚಾಲಕ ಈ ರೀತಿ ಸೂಚನಾಫಲಕ ಅಳವಡಿಸಿದ್ದು ಯಾಕೆ?

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರಿಗಾಗಿ ಚಾಲಕರು ವಿವಿಧ ರೀತಿಯ ಸೂಚನಾ ಫಲಕಗಳನ್ನು ಅಳವಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನೀವೆಲ್ಲರೂ ನೋಡಿರಬಹುದು. ಇದೀಗ ಹೈದರಾಬಾದ್‌ನ ಕ್ಯಾಬ್ ಚಾಲಕನೋರ್ವ ಹಾಕಿರುವ ಅಂತಹುದೇ ಒಂದು ವಿಭಿನ್ನವಾದ ಸೂಚನಾ…

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರಿಗಾಗಿ ಚಾಲಕರು ವಿವಿಧ ರೀತಿಯ ಸೂಚನಾ ಫಲಕಗಳನ್ನು ಅಳವಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನೀವೆಲ್ಲರೂ ನೋಡಿರಬಹುದು. ಇದೀಗ ಹೈದರಾಬಾದ್‌ನ ಕ್ಯಾಬ್ ಚಾಲಕನೋರ್ವ ಹಾಕಿರುವ ಅಂತಹುದೇ ಒಂದು ವಿಭಿನ್ನವಾದ ಸೂಚನಾ ಫಲಕ ನೆಟ್ಟಿಗರ ಗಮನ ಸೆಳೆದಿದೆ.

ಕ್ಯಾಬ್ ಚಾಲಕ ತನ್ನ ಸೀಟಿನ ಹಿಂಬದಿಗೆ ಹಾಕಿರುವ ಮನವಿಯ ಸೂಚನಾ ಫಲಕದಲ್ಲಿ “ಇದು ಕ್ಯಾಬ್ ಮಾತ್ರ, ನಿಮ್ಮ ಖಾಸಗಿ ಸ್ಥಳವಲ್ಲ. ದಯವಿಟ್ಟು ಸಮಾಧಾನದಿಂದ ಅಂತಹ ಕಾಯ್ದುಕೊಂಡು ಕುಳಿತುಕೊಳ್ಳಿ” ಎಂದು ಬರೆಯಲಾಗಿದೆ. 

ಹಲವು ಬಾರಿ ಕ್ಯಾಬ್‌ಗಳಲ್ಲಿ ಜೋಡಿಯಾಗಿ ಪ್ರಯಾಣಿಸುವ ಯುವಕ-ಯುವತಿ ಕಾರಿನಲ್ಲೇ ರೋಮ್ಯಾನ್ಸ್‌ನಲ್ಲಿ ತೊಡಗಿಕೊಂಡು, ಅಂತಹ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದ ಕ್ಯಾಬ್ ಓಡಿಸುವ ಚಾಲಕರು ಇರಿಸುಮುರಿಸು ಅನುಭವಿಸುವ ಪ್ರಸಂಗಗಳು ನಿರ್ಮಾಣವಾಗುತ್ತವೆ. ಹೀಗಾಗಿ ಈ ಕ್ಯಾಬ್‌ನ ಚಾಲಕ, ಯುವಕ-ಯುವತಿ ಜೋಡಿಯಾಗಿ ಹತ್ತುವಾಗಲೇ ಎಚ್ಚರಿಕೆಯಿಂದ ಇರಲಿ ಎನ್ನುವ ಉದ್ದೇಶದಿಂದ ಈ ರೀತಿಯ ಸೂಚನಾ ಫಲಕ ಅಳವಡಿಸಿದ್ದಾನೆ. ಕ್ಯಾಬ್ ಚಾಲಕನ ಈ ಸೂಚನಾ ಫಲಕಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Vijayaprabha Mobile App free

ಕಳೆದವಾರ ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಹಾಕಿದ್ದ ಸೂಚನಾ ಫಲಕ ಸಾಮಾಜಿಕ ತಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು. ಕಾರಿನ ಬಾಗಿಲನ್ನು ನಿಧಾನಕ್ಕೆ ಹಾಕಿ, ನಿಗದಿತ ಸ್ಥಳ ತಲುಪುವವರೆಗೆ ತಾಳ್ಮೆಯಿಂದ, ಗೌರವದಿಂದ ವರ್ತಿಸಿ, ಕ್ಯಾಬ್ ಮಾಲೀಕರು ಎನ್ನುವಂತೆ ದರ್ಪ ತೋರಿಸಬೇಡಿ ಸೇರಿದಂತೆ ಸುಮಾರು 6 ಸಲಹೆಗಳನ್ನು ಸೂಚನಾ ಫಲಕದಲ್ಲಿ ಹಾಕಲಾಗಿತ್ತು. 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.