Home Theft: ದೀಪಾವಳಿಗೆಂದು ಊರಿಗೆ ಹೋದವರಿಗೆ ಕಳ್ಳರ ಶಾಕ್: 1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

ಭಟ್ಕಳ: ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ ಸಮಯ ನೋಡಿ ಮನೆಯ ಮುಂಬಾಗಿಲನ್ನು ಮುರಿದು 40ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಕಟಗೇರಿ ನಿವಾಸಿ ಮಮತಾ ಶೆಟ್ಟಿ…

ಭಟ್ಕಳ: ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ ಸಮಯ ನೋಡಿ ಮನೆಯ ಮುಂಬಾಗಿಲನ್ನು ಮುರಿದು 40ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಕಟಗೇರಿ ನಿವಾಸಿ ಮಮತಾ ಶೆಟ್ಟಿ ಎಂಬುವವರ ಮನೆಯಲ್ಲೇ ಕಳ್ಳತನ ನಡೆದಿದೆ.

ಮಮತಾ ಕೃಷ್ಣ ಶೆಟ್ಟಿ ಕಳೆದೆರಡು ವರ್ಷಗಳಿಂದ ತಮ್ಮ ತವರು ಮನೆಯಲ್ಲೇ ವಾಸವಿದ್ದು, ನ.2 ರಂದು ದೀಪಾವಳಿ ಹಬ್ಬದ ಹಿನ್ನೆಲೆ ತನ್ನ ಗಂಡ, ಮಕ್ಕಳ ಜೊತೆಗೆ ತಾಲೂಕಿನ ತಲಗೋಡಿನ ತನ್ನ ಗಂಡ ಮನೆಗೆ ಹಬ್ಬದ ಆಚರಣೆಗೆ ತೆರಳಿದ್ದರು. ನ.3ರ ಭಾನುವಾರ ದಂದು ಮಮತಾ ಶೆಟ್ಟಿ ಅವರ ಸಹೋದರ ಮನೋಜ ಶೆಟ್ಟಿ ಅವರು ತೆರಳಿ ಸಂಜೆ 7 ಗಂಟೆಗೆ ಪೂಜೆ ಮಾಡಿ ಮನೆಗೆ ಬೀಗ ಹಾಕಿ ಅವರ ಮನೆಗೆ ತೆರಳಿದ್ದರು. 

ನ.4 ರಂದು ಬೆಳಿಗ್ಗೆ 6.30 ರ ಸುಮಾರಿಗೆ ದೇವರ ಪೂಜೆ ಮಾಡಲೆಂದು ಮನೆಯ ಬಾಗಿಲು ತೆರೆದಾಗ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿದ್ದು, ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಯಾರೋ ಮನೆಯೊಳಗಿನ ಗೊದ್ರೇಜ್ ಕಪಾಟನ್ನು ತೆರೆದು ಅದರಲ್ಲಿದ್ದ ವಸ್ತುಗಳೆಲ್ಲವನ್ನೂ ಚೆಲ್ಲಾಪಿಲ್ಲಿಯಾಗಿಸಿದ್ದು, ತಕ್ಷಣ ಮನೋಜ ಶೆಟ್ಟಿ ಅವರು ಅವರ ಸಹೋದರಿ ಮಮತಾ ಶೆಟ್ಟಿ ಹಾಗೂ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.

Vijayaprabha Mobile App free

ಕಳ್ಳರು ದೇವರ ಕೋಣೆಯ ಮುಂದೆ ಇಟ್ಟಿರುವ ಮತ್ತು ಮಲಗುವ ಕೋಣೆಯಲ್ಲಿದ್ದ ಎರಡೂ ಕಪಾಟನ್ನು ಮುರಿದಿದ್ದಾರೆ. ದೇವರ ಕೋಣೆಯ ಮುಂದೆ ಇಟ್ಟಿರುವ ಗೊದ್ರೇಜ್ ಕಪಾಟಿನಲ್ಲಿ ಇಟ್ಟಿದ್ದ 10 ಗ್ರಾಂನ ಒಂದು ಬಂಗಾರದ ಚೈನ್, 15 ಗ್ರಾಂನ 5 ಕೈ ಉಂಗುರ, 15 ಗ್ರಾಂನ 2 ಬಂಗಾರದ ಕಿವಿ ಓಲೆ ಸೇರಿ ಒಟ್ಟು 40 ಗ್ರಾಂ ಬಂಗಾರದ ಆಭರಣ ಅಂದಾಜು ಬೆಲೆ 1.40 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.