BPL card : ಬಿಪಿಎಲ್ ಕಾರ್ಡ್ ನ್ನು ಪ್ರತಿಯೊಬ್ಬರು ಪಡೆಯಬೇಕೆಂಬ ಅಪೇಕ್ಷೆ ಹೊಂದಿರುತ್ತಾರೆ. ಆದ್ರೆ, ಕೆಲವೊಮ್ಮೆ ಬಿಪಿಎಲ್ ಕಾರ್ಡ್ ಮಾಡಿಸಲು ಹೋದರೂ ಆಗಿರುವುದಿಲ್ಲ. ಇದೀಗ, ಬಿಪಿಎಲ್ ಕಾರ್ಡ್ ಪಡೆಯಲು ಸುವರ್ಣಾವಕಾಶ ಸಿಕ್ಕಿದೆ.
ಹೌದು, ಶೀಘ್ರವೇ ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದ್ದು, ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿಯನ್ನ ಕಳಿಸಲಾಗುತ್ತದೆ. ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ನಿರ್ಧಾರ ಆಗುತ್ತದೆ.
ಇದನ್ನೂ ಓದಿ: Ration Card EKYC : ಪಡಿತರ ಚೀಟಿದಾರರೇ ಗಮನಿಸಿ; `E-KYC’ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
ಹೊಸ BPL card ಪಡೆಯಲು ಈ ಮಾನದಂಡಗಳು ಇರಲೇಬೇಕು
ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದ್ದು, ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ 3 ಹೆಕ್ಟರ್ ಒಣಭೂಮಿ ಹಾಗೇ 1 ಹೆಕ್ಟರ್ ಗೂ ಕಡಿಮೆ ನೀರಾವರಿ ಭೂಮಿ ಹೊಂದಿರಬೇಕು. ಅಷ್ಟೇ ಅಲ್ಲ, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗಿದ್ದು, ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಎಂಬುದು ನಿರ್ಧರಿತ ಆಗಿರಲಿದೆ.
ಇದನ್ನೂ ಓದಿ: New Ration Card : ಹೊಸ ಪಡಿತರ ಚೀಟಿ ಪಡೆಯಲು ಮಾನದಂಡಗಳೇನು? ಯಾವ ದಾಖಲೆ ಕಡ್ಡಾಯ
ಹೊಸ BPL card ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯವಾಗಿದೆ
ಇನ್ನು, ಹೊಸದಾಗಿ BPL, APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ದಪಡಿಸುವುದು ಅಗತ್ಯವಾಗಿದ್ದು, ಪಡಿತರ ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಆದಾಯ ಪ್ರಮಾಣ ಪತ್ರ , ವಿದ್ಯುತ್ ಬಿಲ್, ವಿಳಾಸ ಪುರಾವೆ ಬೇಕಾಗುತ್ತದೆ