Street Dog Attack: ಮನೆಯಿಂದ ಹೊರಬಂದ ಮಗುವಿನ ಮೇಲೆ ಬೀದಿನಾಯಿ ದಾಳಿ!

ಬಾಗಲಕೋಟೆ: ಮನೆಯ ಗೇಟ್‌ನಿಂದ ರಸ್ತೆಗೆ ಬಂದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿಯೊಂದು ದಾಳಿ ಮಾಡಿದ ಆಘಾತಕಾರಿ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ. ಮನೆಯಿಂದ ಹೊರ ಬಂದ 4 ವರ್ಷದ ಮಗುವಿನ…

ಬಾಗಲಕೋಟೆ: ಮನೆಯ ಗೇಟ್‌ನಿಂದ ರಸ್ತೆಗೆ ಬಂದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿಯೊಂದು ದಾಳಿ ಮಾಡಿದ ಆಘಾತಕಾರಿ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ. ಮನೆಯಿಂದ ಹೊರ ಬಂದ 4 ವರ್ಷದ ಮಗುವಿನ ಮೇಲೆ ವಿನಾಕಾರಣ ಬೀದಿ ನಾಯಿ ದಾಳಿ ನಡೆಸಿರುವ ದೃಶ್ಯಾವಳಿ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಗೇಟ್ ತೆರೆದು ರಸ್ತೆಗೆ ಬಂದಿದೆ. ಈ ವೇಳೆ ಸ್ವಲ್ಪ ದೂರದಲ್ಲೇ ಬೀದಿನಾಯಿ ಇರುವುದು ಕಂಡುಬಂದಿದೆ. ನಾಯಿ ಕಂಡು ಮಗು ದೂರದಲ್ಲೇ ನಿಂತುಕೊಂಡಿದ್ದು, ಈ ವೇಳೆ ಹಿಂತಿರುಗಿದ ನಾಯಿ ಓಡಿಹೋಗಿ ಮಗುವಿನ ಮೇಲೆ ಎಗರಿದೆ. ಪರಿಣಾಮ ಮಗು ನೆಲಕ್ಕೆ ಬಿದ್ದಿದ್ದು, ನಾಯಿ ದಾಳಿಯಿಂದ ಚೀರಾಡಿದೆ.

ಮಗುವಿನ ಚೀರಾಟ ಕೇಳಿ ತಾಯಿ ಹೊರಬಂದಿದ್ದು, ಮಗುವನ್ನು ಕಚ್ಚುತ್ತಿದ್ದ ನಾಯಿ ಕಂಡು ಕೂಡಲೇ ಬೆದರಿಸಿ ಓಡಿಸಿದ್ದಾರೆ. ನಾಯಿ ಕಚ್ಚಿದ ಪರಿಣಾಮ ಮಗುವಿಗೆ ಹಲವೆಡೆ ಗಾಯಗಳಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Vijayaprabha Mobile App free

ಇತ್ತೀಚೆಗೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.