ಕುಂದಾಪುರ: ಪರೀಕ್ಷೆಗಳು ಅಂದ್ರೆ ವಿದ್ಯಾರ್ಥಿಗಳಲ್ಲಿ ಭಯ ಇರುವುದು ಸಹಜ. ಬುದ್ದಿವಂತ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯಲು ಬಯಸುತ್ತಾರೆ. ಆದರೆ ಓದಿನಲ್ಲಿ ಹಿಂದೆ ಇರುವ ಕೆಲ ವಿದ್ಯಾರ್ಥಿಗಳು ಪಾಸಾದರೆ ಸಾಕಪ್ಪಾ ಎನ್ನುವ ಯೋಚನೆಯಲ್ಲಿ ಇರುತ್ತಾರೆ. ಅದರಂತೆ ಇಲ್ಲೊಬ್ಬ ವಿದ್ಯಾರ್ಥಿಯೂ ಸಹ ಕೇವಲ ಜಸ್ಟ್ ಪಾಸ್ ಆದರೂ ಸಾಕಪ್ಪಾ ದೇವರೇ ಎಂದು ದೇವರಿಗೇ ಪತ್ರ ಬರೆದಿದ್ದಾನೆ.
ಈ ಒಂದು ಘಟನೆ ಕುಂದಾಪುರದಲ್ಲಿ ನಡೆದಿದೆ. ಒಬ್ಬ ವಿದ್ಯಾರ್ಥಿಯು ಒಂದು ಪತ್ರ ಬರೆದು ಇಷ್ಟಿಷ್ಟು ಅಂಕಗಳನ್ನು ನೀಡುವಂತೆ ಮತ್ತು ಉತ್ತೀರ್ಣನಾಗುವಂತೆ ಮಾಡಲು ದೇವರನ್ನು ಕೇಳಿಕೊಂಡಿದ್ದಾನೆ. ಈ ಪತ್ರ ಕುಂದಾಪುರದ ಹೊಳಮಗ್ಗಿ ಹೊರ ಬೊಬ್ಬರ್ಯ ದೇವಾಲಯದ ದೇಣಿಗೆಯ ಹುಂಡಿಯಲ್ಲಿ ಕಂಡುಬಂದಿದೆ.
ವಿದ್ಯಾರ್ಥಿಯು ಕೇವಲ ಪಾಸ್ ಮಾಡಲು ವಿನಂತಿಸಿದ ಪತ್ರ ದೇವಾಲಯದ ಹುಂಡಿ ಎಣಿಕೆಯ ಸಮಯದಲ್ಲಿ ಕಂಡುಬಂದಿದೆ. ಇದೀಗ ಅದರ ಫೋಟೋ ಈಗ ವೈರಲ್ ಆಗುತ್ತಿದೆ. ಈ ಸಂಬಂಧದ ಫೋಟೋವನ್ನು ನಮ್ಮ ಕುಂದಾಪುರ ಎಂಬ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಹಲವಾರು ಕಮೆಂಟ್ಗಳು ಬಂದಿವೆ.