ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಶಕ್ತಿ ದೇವತೆ ಉಚ್ಚoಗೆಮ್ಮನ ಸನ್ನಿಧಿಯಲ್ಲಿ ಮಾರ್ಚ್ 09 ರಂದು ಉಚಿತವಾಗಿ ಸರಳ ಸಾಮೂಹಿಕ ವಿವಾಹ ನಡೆಯಲಿದ್ದು, ಇದರ ಸದುಪಯೋಗವನ್ನು ಭಕ್ತರೂ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮಲ್ಲಪ್ಪ ತಿಳಿಸಿದ್ದಾರೆ.
ಹೌದು, ಉಚ್ಚoಗೆಮ್ಮನ ಸನ್ನಿಧಿಯಲ್ಲಿ ಮಾರ್ಚ್ 09 ರಂದು ಉಚಿತವಾಗಿ ಸರಳ ಸಾಮೂಹಿಕ ವಿವಾಹ ನಡೆಯಲಿದ್ದು, ವಧು-ವರರು ವಿವಾಹಕ್ಕಾಗಿ ನೊಂದಾಯಿಸಿಕೊಳ್ಳಲು ದೇವಸ್ಥಾನದ ಕಚೇರಿಯನ್ನ ಸಂಪರ್ಕಿಸಬೇಕು.
ಈ ಸಾಮೂಹಿಕ ವಿವಾಹದಲ್ಲಿ ಸರಳವಾಗಿ ವಿವಾಹವಾಗುವ ವರನಿಗೆ ಶರ್ಟ್ ಮತ್ತು ಪಂಚೆಗಾಗಿ ಹೂವಿನಹಾರಕ್ಕೆ 5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆಸೀರೆ ಇತ್ಯಾದಿಗಳಿಗೆ 10 ಸಾವಿರ, ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ ಮತ್ತು 2 ಗುಂಡುಗಳನ್ನ ದೇವಾಲಯದಿಂದ ಭರಿಸಲಾಗುವುದು.
ಒಟ್ಟಾರೆಯಾಗಿ ಈ ಸಾಮೂಹಿಕ ವಿವಾಹದಲ್ಲಿ ಸರಳವಾಗಿ ಸಪ್ತಪದಿ ತುಳಿಯುವ ವಧು ವರರಿಗೆ 55,000 ರೂ ಪ್ರೋತ್ಸಾಹಧನ ನೀಡಲಾಗುತ್ತದೆ.