heavy rain: ರಾಜ್ಯದಲ್ಲಿ ಭಾರೀ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Heavy rain: ದೇಶದಲ್ಲಿ ಸೇರಿ ರಾಜ್ಯದಲ್ಲೂ ಮುಂಗಾರು ಚುರುಕುಗೊಂಡಿದ್ದು, ಈಗಾಗಲೇ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ, ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೌದು, ಉತ್ತರ ಭಾರತ ಸೇರಿ ಈಶಾನ್ಯ…

heavy rain

Heavy rain: ದೇಶದಲ್ಲಿ ಸೇರಿ ರಾಜ್ಯದಲ್ಲೂ ಮುಂಗಾರು ಚುರುಕುಗೊಂಡಿದ್ದು, ಈಗಾಗಲೇ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ, ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

rain-vijayaprabha-news
Heavy rain

ಹೌದು, ಉತ್ತರ ಭಾರತ ಸೇರಿ ಈಶಾನ್ಯ ರಾಜ್ಯಗಳು ಭಾರಿ ಪ್ರಮಾಣದ ಮಳೆಯಿಂದ ತತ್ತರಿಸಿದ್ದು, 62 ವರ್ಷದ ಬಳಿಕ ದೆಹಲಿ ಹಾಗೂ ಮುಂಬೈಗೆ ಒಂದೇ ದಿನ ಮಾನ್ಸೂನ್ ಪ್ರವೇಶಿಸಿದೆ. ಇತ್ತ ರಾಜ್ಯದಲ್ಲೂ ಮಳೆ ಚುರುಕುಗೊಂಡಿದೆ. ಇಂದೂ ಸಹ ಹಲವು ಕಡೆ ಮಳೆ ಮುಂದುವರೆಯಲಿದೆ.

ಇದನ್ನು ಓದಿ: ಇಂದು ಬುಧಗ್ರಹದ ಪ್ರಭಾವದಿಂದ ಈ ರಾಶಿಗಳಿಗೆ ಉತ್ತಮ ಫಲಗಳು..!

Vijayaprabha Mobile App free

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ಇಂದಿನಿಂದ ಜೂ.30ರವರೆಗೆ ಭಾರೀ ಮಳೆ (Heavy rain) ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Heavy rain: ಮುಂಗಾರು ಆಗಮನ ಮುನ್ನಡೆಯಲಿದೆ..

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಮುಂಬೈ, ಮಧ್ಯಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಭಾಗಗಳು, ಚಂಡೀಗಢ, ದೆಹಲಿ ಸೇರಿದಂತೆ ಹರಿಯಾಣದ ಹೆಚ್ಚಿನ ಭಾಗಗಳು, ಗುಜರಾತ್‌ನ ಕೆಲವು ಭಾಗಗಳು ಮತ್ತು ಪಂಜಾಬ್‌ನ ಮುಂದಿನ ಎರಡು ದಿನಗಳ ಕಾಲ ಮುಂದುವರೆಯಲು ಪರಿಸ್ಥಿತಿಗಳು ಪರಿಪೂರ್ಣವಾಗಿವೆ ಎಂದು ತಿಳಿಸಿದೆ.

ಇದನ್ನು ಓದಿ: ಆಧಾರ್ ಪ್ಯಾನ್ ಲಿಂಕ್ ಗೆ ಅಂತಿಮ ಗಡುವು ಕೊನೆಗೊಳ್ಳುತ್ತಿದೆ.. ಹೀಗೆ ಅಪ್ ಡೇಟ್ ಮಾಡಿ..!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.