Wriddhiman saha retirement :ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಹಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಹೌದು, ಪ್ರಸಕ್ತ ರಣಜಿ ಋತು ತನ್ನ ಕೊನೆಯ ಅವಧಿಯಾಗಿದೆ ಎಂದು ವೃದ್ಧಿಮಾನ್ ಸಹಾ ಹೇಳಿದ್ದು, ಮುಂಬರುವ IPL ಹರಾಜಿಗೂ ಅವರು ನೋಂದಾಯಿಸಿಕೊಂಡಿಲ್ಲ. ಇದರೊಂದಿಗೆ 40ರ ಹರೆಯದ ಈ ವಿಕೆಟ್ ಕೀಪರ್ IPLಗೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು, ವೃದ್ಧಿಮಾನ್ ಸಹಾ ಭಾರತದ ಪರ 40 ಟೆಸ್ಟ್ ಮತ್ತು 9 ODI ಆಡಿದ್ದಾರೆ ಮತ್ತು ರಣಜಿಯಲ್ಲಿ ಬಂಗಾಳ ಮತ್ತು ತ್ರಿಪುರಾ ಮತ್ತು IPLನಲ್ಲಿ KKR, CSK, PBKS, SRH, GT ಅನ್ನು ಪ್ರತಿನಿಧಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.