ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಬಂದಿಲ್ಲ. ಹೀಗಾಗಿ, ಸಾಲದ ಕಂತು ಪಾವತಿ, ಔಷಧೋಪಚಾರ ಸೇರಿದಂತೆ ಇತರೆ ಉದ್ದೇಶಕ್ಕೆ ಗ್ಯಾರಂಟಿ ಹಣವನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಹೌದು, ಜನವರಿ ತಿಂಗಳ ಬಳಿಕ ಈವರೆಗೆ ಗೃಹಲಕ್ಷ್ಮಿ ಸಹಾಯಧನ ಪಾವತಿಯಾಗಿಲ್ಲ. ಈ ಯೋಜನೆ ಆರಂಭವಾದ ಕೆಲ ತಿಂಗಳು ಸಕಾಲಕ್ಕೆ ಸಹಾಯಧನ ಪಾವತಿಯಾಗುತ್ತಿತ್ತು. ಹೀಗಾಗಿ, ಮಹಿಳೆಯರು ಆ ಹಣವನ್ನು ಪ್ರತಿ ತಿಂಗಳು ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದರು. ಈಗ ಜನವರಿ ತಿಂಗಳ ಬಳಿಕ ಈವರೆಗೆ ಗೃಹಲಕ್ಷ್ಮಿ ಸಹಾಯಧನ ಪಾವತಿಯಾಗಿಲ್ಲದ್ದರಿಂದ ಇತರೆ ಉದ್ದೇಶಕ್ಕೆ ಗ್ಯಾರಂಟಿ ಹಣವನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.