ಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವ

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆ ಅಂಗಾಂಗ ದಾನ ಮಾಡಿದ್ದು, ಐವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾ ಯೋಧರು ಸೇರಿದಂತೆ…

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆ ಅಂಗಾಂಗ ದಾನ ಮಾಡಿದ್ದು, ಐವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾ ಯೋಧರು ಸೇರಿದಂತೆ ಐದು ಜನರ ಜೀವವನ್ನು ಮಹಿಳೆ ಉಳಿಸಿ ಮಾದರಿಯಾಗಿದ್ದಾರೆ.

ಭಾರತೀಯ ಯೋಧರಿಬ್ಬರಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಗೆ ಒಳಗಾಗಿದ್ದರು. ಅವರಿಗೆ ಮೂತ್ರಪಿಂಡ ಕಸಿ ಮಾಡುವ ಮೂಲಕ ಮರುಜನ್ಮ ನೀಡಲಾಗಿದೆ. ಇನ್ನುಳಿದಂತೆ ಮೂವರಿಗೆ ಇತರೆ ಅಂಗಾಂಗ ಕಸಿ ಮಾಡಲು ಅಂಗಾಂಗಗಳನ್ನು ಕಸಿ ಸಮನ್ವಯ ಕೇಂದ್ರ (ZTCC) ಮತ್ತು ಆರ್ಮಿ ಆರ್ಗನ್ ರಿಟ್ರೀವಲ್ ಮತ್ತು ಟ್ರಾನ್ಸ್‌ಪ್ಲಾಂಟ್ ಅಥಾರಿಟಿ (AORTA) ಗೆ ಕಳುಹಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.