Nuclear attack : ಭಾರತ-ಪಾಕ್ ನಡುವಿನ ಕದನ ವಿರಾಮವನ್ನು ಪಾಕ್ ಉಲ್ಲಂಘಿಸಿ ತನ್ನ ನರಿಬುದ್ಧಿಯನ್ನು ಮತ್ತೊಮ್ಮೆ ತೋರಿದೆ. ಭಾರತವೂ ಪ್ರತಿ ದಾಳಿ ನಡೆಸಿದೆ. ಹೀಗೆ ಯುದ್ಧ ಮು೦ದುವರೆದು ಪರಮಾಣು ದಾಳಿ ನಡೆಯಬಹುದೇ ಎ೦ಬ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ. ಪರಮಾಣು ಸ್ಫೋಟವು ದೊಡ್ಡ ವಿನಾಶ ಮತ್ತು ವಿಕಿರಣಶೀಲ ವಸ್ತುಗಳ ವ್ಯಾಪಕ ಪ್ರಸರಣಕ್ಕೆ ಕಾರಣವಾಗಬಹುದು. ಹಾಗಾಗಿ ಪರಮಾಣು ದಾಳಿ ನಡೆದರೆ ಸುರಕ್ಷಿತವಾಗಿ ಬದುಕುಳಿಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಎಮರ್ಜನ್ಸಿ ಕಿಟ್
ನಿಮಗೆ ಒಂದು ವಾರದ ವರೆಗಿನ ಅಗತ್ಯ ಆಹಾರ, ಟಾರ್ಚ್, ಬ್ಯಾಟರಿ, ಪವರ್ ಬ್ಯಾಂಕ್, ಬಟ್ಟೆ, ಮಾಸ್ಕ್ ಪ್ರಥಮ ಚಿಕಿತ್ಸಾ ಕಿಟ್ ಇತ್ಯಾದಿಗಳನ್ನು ತಯಾರಿ ಮಾಡಿಟ್ಟುಕೊಂಡಿರಿ. ರೇಡಿಯೋ ಅಥವಾಅಂತಹ ಯಾವುದೇ ನೆಟ್‌ವರ್ಕ್ ಅಗತ್ಯವಿರದ ವಸ್ತುಗಳನ್ನು ಮಾಹಿತಿಗಾಗಿ ಜೊತೆಗಿರಿಸಿಕೊಳ್ಳಿ.
ದಾಳಿ ನಡೆದರೆ ಹೀಗೆ ಮಾಡಿ
ನೀವಿರುವ ಪ್ರದೇಶದಲ್ಲಿ ಆಕಾಶದಲ್ಲಿ ಪ್ರಕಾಶವಾಹಕ ಸ್ಫೋಟ (flash) ಕಂಡ ತಕ್ಷಣವೇ ನೆಲದತ್ತ ಬಿದ್ದು ನಿಮ್ಮ ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳಿ. ತಕ್ಷಣ ಒಳಗೆ ಹೋಗಿ, ನಿಮ್ಮ ಮನೆಯ ಕಟ್ಟಡದ ಒಳಗೆ, ಸಾಧ್ಯವಾದರೆ ನೆಲಮಹಡಿಗೆ ಹೋಗಿ. ಮನೆಯ ಕಿಟಕಿಗಳು, ಬಾಗಿಲುಗಳನ್ನು ಮುಚ್ಚಿಡಿ. ಸರ್ಕಾರದಿಂದ ಯಾವುದೇ ಬಂಕರ್‌ನ ವ್ಯವಸ್ಥೆ ಇದ್ದರೆ ಅಲ್ಲಿಗೆ ಹೋಗಲು ಪ್ರಯತ್ನಿಸಿ
ಏನು ಮಾಡಬೇಕು?
- ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ
- ರೇಡಿಯೋ/ಟೆಲಿವಿಷನ್ ಆನ್ ಮಾಡಿ ಮತ್ತು ನಿಮ್ಮ ಸ್ಥಳೀಯ ಪ್ರಾಧಿಕಾರದಿಂದ ಸಾರ್ವಜನಿಕ ಪ್ರಕಟಣೆಗಳಿಗಾಗಿ ನೋಡಿ
- ಎಲ್ಲಾ ಆಹಾರ, ನೀರನ್ನು ಮುಚ್ಚಿಡಿ, ಮತ್ತು ಅಂತಹ ಮುಚ್ಚಿದ ವಸ್ತುಗಳನ್ನು ಮಾತ್ರ ಸೇವಿಸಿ
- ದಾಳಿ ನಡೆದಾಗ ತೆರೆದ ಸ್ಥಳದಲ್ಲಿದ್ದರೆ, ನಿಮ್ಮ ಮುಖ ಮತ್ತು ದೇಹವನ್ನು ಒದ್ದೆಯಾದ ಕರವಸ್ತ್ರ, ಟವಲ್, ಧೋತಿ ಅಥವಾ ಸೀರೆಯಿಂದ ಮುಚ್ಚಿಕೊಳ್ಳಿ
- ಮನೆಗೆ ಹಿ೦ತಿರುಗಿ, ಬಟ್ಟೆ ಬದಲಾಯಿಸಿ. ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಬಳಸಿ
- ಸ್ಥಳೀಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿ & ಅವರ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಿ
- ಪರಮಾಣು ವಿಕಿರಣ ಅಪಾಯದ ಬಗ್ಗೆ ತಿಳಿದುಕೊಳ್ಳಿ, ಅಗತ್ಯ ಮತ್ತು ಸರಿಯಾದ ಮಾಹಿತಿ ಇರಲಿ