ಚಿತ್ರದುರ್ಗ : ಚಿತ್ರದುರ್ಗ ನಗರದ ಪ್ರಮುಖ ವೃತ್ತವಾಗಿರೋ ಗಾಂಧಿ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡ್ತಿರೋ ವಾಹನ ಸವಾರರಿಗೆ ಫೈನ್ ಬಿಸಿ ಮುಟ್ಟಿಸ್ತಿದ್ದಾರೆ.
ಹೌದು, ಚಿತ್ರದುರ್ಗದ ಪೊಲೀಸರು ಅನೇಕ ಬಾರಿ ವಾಹನ ಸವಾರರಿಗೆ ಎಲ್ಲರೂ ತಪ್ಪದೇ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರೂ ಕೂಡ ಜಿಲ್ಲೆಯ ಬಹುತೇಕ ಜನರು ಪಾಲನೆ ಮಾಡಿರುವುದಿಲ್ಲ.
ಇದ್ರಿಂದ ಆಕ್ರೋಶಗೊಂಡ ಕೋಟೆನಾಡಿನ ಪೊಲೀಸರು ಮುಲಾಜಿಲ್ಲದೇ ಓರ್ವ ಯುವಕನಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬರೋಬ್ಬರಿ 18000 ಸಾವಿರ ರೂ ದಂಡ ಶುಲ್ಕವನ್ನು ವಿಧಿಸಿ ಬೈಕ್ ಸವಾರರು ಹಾಗೂ ಇನ್ನಿತರ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.