ಮುಂಬೈ: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿಗಳು ಇದೀಗ ಶುಭ ಸುದ್ದಿಯೊಂದನ್ನು ನೀಡಿದ್ದಾರೆ.
ಗಾಯಕಿ ಶ್ರೇಯಾ ಘೋಷಾಲ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂತಸದ ಸುದ್ದಿಯನ್ನು ಅವರೇ ಸಾಮಾಜಿಕ ಜಾಣಗಳಲ್ಲಿ ಹಂಚಿಕೊಂಡಿದ್ದು, ದೇವರ ಆಶೀರ್ವಾದದಿಂದ ಇಂದು ಮದ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂತಹ ಸಂತಸವನ್ನು ನಾವು ಹಿಂದೆಂದೂ ಅನುಭವಿಸಿರಲಿಲ್ಲ ಎಂದು ಹೇಳಿದ್ದು, ಪತಿ ಶಿಲಾದಿತ್ಯ ಹಾಗು ನಮ್ಮ ಕುಟುಂಬಸ್ಥರು ತುಂಬಾ ಸಂತೋಷವಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ‘ಬೇಬಿ ಶ್ರೇಯಾದಿತ್ಯ’ಗೆ ನಿಮ್ಮ ಎಲ್ಲ ಪ್ರೀತಿ ಮತ್ತು ಆಶೀರ್ವಾದ ಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.
2015ರಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ಅವರೊಂದಿಗೆ ವಿವಾಹವಾಗಿದ್ದರು.
View this post on Instagram