ಯುನಿಟ್ ಲಿಂಕ್ಡ್ ವಿಮಾ ಯೋಜನೆ : ಯುಲಿಪ್ಸ್ ಅಥವಾ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಯೋಜನೆಯು(ULIPS) ಒಂದೇ ಉತ್ಪನ್ನದಲ್ಲಿ ಎರಡು ಗುರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಹೂಡಿಕೆ ಮತ್ತು ವಿಮೆಯನ್ನು ಸಂಯೋಜಿಸುವ ಒಂದು ರೀತಿಯ ವಿಮಾ ಯೋಜನೆಯಾಗಿದೆ.
ಇದು ನಿಮಗೆ ಜೀವ ವಿಮೆಯನ್ನು ಒದಗಿಸುತ್ತದೆ ಮತ್ತು ಷೇರು ಮಾರುಕಟ್ಟೆ, ಸಾಲ ನಿಧಿಗಳು ಅಥವಾ ಎರಡರ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಮೊದಲ ಯುಲಿಪ್ ಅನ್ನು 1971 ರಲ್ಲಿ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಮತ್ತು 1989 ರಲ್ಲಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಪರಿಚಯಿಸಿದೆ.
ಯುಲಿಪ್ಸ್ ಅಥವಾ ಯುನಿಟ್ ಲಿಂಕ್ಡ್ ವಿಮಾ ಯೋಜನೆಯ ವಿಧಗಳು

ಯುಲಿಪ್ಸ್ ಗಳ ವರ್ಗೀಕರಣವು ಮ್ಯೂಚುವಲ್ ಫಂಡ್ ಪ್ರಕಾರವನ್ನು ಅವಲಂಬಿಸಿರುತ್ತದೆ. ಇಕ್ವಿಟಿ ಫಂಡ್ ಗಳಲ್ಲಿ ಹೆಚ್ಚಿನ ಹಣವನ್ನು ವಿವಿಧ ಕಂಪನಿಗಳ ಷೇರುಗಳಂತಹ ಈಕ್ವಿಟಿ ಆಧಾರಿತ ಸ್ವತ್ತುಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರೀಮಿಯಂಗಳನ್ನು ಸಾಲ ಸಾಧನಗಳು ಅಥವಾ ಬಾಂಡ್ ಗಳ ರೀತಿ ಹೂಡಿಕೆ ಮಾಡಲು ಡೆಬ್ಟ್ ಫಂಡ್ ಗಳಿವೆ. ಬ್ಯಾಲೆನ್ಸ್ಡ್ ಫಂಡ್ ಗಳಲ್ಲಿ ಪ್ರೀಮಿಯಂಗಳನ್ನು ಈಕ್ವಿಟಿ ಮತ್ತು ಡೆಬ್ಟ್ ಮಾರ್ಕೆಟ್ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. 4G ಅಥವಾ ಹೋಲ್ ಲೈಫ್ ಯುಲಿಪ್ಸ್ ಕನಿಷ್ಠ ಶುಲ್ಕಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ಮಹಿಳೆಯರಿಗಾಗಿ ಸರ್ಕಾರದ ತಾಯಿ ಭಾಗ್ಯ ಯೋಜನೆ; ಸೌಲಭ್ಯಗಳು, ಅರ್ಜಿ ಸಲ್ಲಿಕೆ
ಯುನಿಟ್ ಲಿಂಕ್ಡ್ ವಿಮಾ ಯೋಜನೆ ಹಾಗೂ ಮ್ಯೂಚುವಲ್ ಫಂಡ್ ಗಳಲ್ಲಿರುವ ವ್ಯತ್ಯಾಸವೇನು?
ಯುಲಿಪ್ಸ್ ಅಥವಾ ಯುನಿಟ್ ಲಿಂಕ್ಡ್ ವಿಮಾ ಯೋಜನೆ ಮತ್ತು ಮ್ಯೂಚುವಲ್ ಫಂಡ್‌ಗಳು ಎರಡೂ ಲಾಭದಾಯಕ ಹೂಡಿಕೆ ಸಾಧನಗಳಲ್ಲಿ ಒಂದಾಗಿದೆ. ಯುಲಿಪ್ಸ್, ಹೂಡಿಕೆ ಮತ್ತು ಲೈಫ್ ಕವರ್‌ನ ಎರಡು ಪ್ರಯೋಜನಗಳನ್ನು ಒದಗಿಸುತ್ತದೆ. ಪ್ರೀಮಿಯಂನ ಒಂದು ಭಾಗವು ಜೀವ ವಿಮೆಗೆ ಹೋಗುತ್ತದೆ, ಉಳಿದ ಭಾಗವನ್ನು ಮಾರುಕಟ್ಟೆ-ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಮ್ಯೂಚುವಲ್ ಫಂಡ್ ಗಳಲ್ಲಿ, ವಿವಿಧ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ ಸ್ಟಾಕ್‌ಗಳು, ಮನಿ ಮಾರ್ಕೆಟ್ ಸಾಧನಗಳಂತಹ ವಿವಿಧ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಯುಲಿಪ್ಸ್ ಅಥವಾ ಯುನಿಟ್ ಲಿಂಕ್ಡ್ ವಿಮಾ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಯುಲಿಪ್ ಗಳಲ್ಲಿ ನಿಮ್ಮ ಪ್ರೀಮಿಯಂನ ಒಂದು ಭಾಗವನ್ನು ಷೇರು ಮಾರುಕಟ್ಟೆ, ಬಾಂಡ್‌ಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಉಳಿದ ಭಾಗವನ್ನು ವಿಮಾ ಕವಚಕ್ಕಾಗಿ ಬಳಸಲಾಗುತ್ತದೆ. ಹೂಡಿಕೆ ಮಾಡಿದ ಮೊತ್ತವನ್ನು ಯುನಿಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ಈ ಯುನಿಟ್‌ಗಳ ಮೌಲ್ಯ ಮಾರುಕಟ್ಟೆ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಯುಲಿಪ್ ಗಳಲ್ಲಿ ಸಾಮಾನ್ಯವಾಗಿ 5 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಈ ಅವಧಿಯ ನಂತರ ಹೂಡಿಕೆಯನ್ನು ಹಿಂಪಡೆಯಬಹುದು. ಮಾರುಕಟ್ಟೆ ಸ್ಥಿತಿಗತಿಗಳ ಪ್ರಕಾರ ಪುನಃ ಹೂಡಿಕೆ ಮಾಡಬಹುದು.
ಇದನ್ನೂ ಓದಿ: Fastest internet | ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಸ್ಪೀಡ್ ಹೊಂದಿರುವ ರಾಷ್ಟ್ರಗಳು
ಯುಲಿಪ್ಸ್ ವಿಮೆಗೆ ಸಂಬಂಧಿಸಿದ ತೆರಿಗೆ ಪ್ರಯೋಜನಗಳು ಯಾವುವು?
ಯುಲಿಪ್ಸ್ ಯೋಜನೆಗಳಿಗೆ ಪಾವತಿಸಿದ ಪ್ರೀಮಿಯಂಗಳು, ಸಂಗ್ರಹವಾದ ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ಪ್ರತಿ ವರ್ಷಕ್ಕೆ ಗರಿಷ್ಠ ₹1.5 ಲಕ್ಷದಷ್ಟು ತೆರಿಗೆ ಕಡಿತಕ್ಕಾಗಿ ಅರ್ಹವಾಗಿವೆ. ಇದು ನಿಮ್ಮ ತೆರಿಗೆ ಪರವಾದ ಆದಾಯವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಯುಲಿಪ್ ಯೋಜನೆಯಿಂದ ನಿಧನದ ಮೊತ್ತವು, ನಾಮಿನಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(10D) ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಈ ತೆರಿಗೆ ಪ್ರಯೋಜನಗಳು ಯುಲಿಪ್ ಯೋಜನೆಗಳ ಹೂಡಿಕೆಗಾಗಿ ಆಕರ್ಷಕ ಆಯ್ಕೆಯಾಗಿವೆ.
ಯುನಿಟ್ ಲಿಂಕ್ಡ್ ವಿಮಾ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?
ಯುಲಿಪ್ ಅಥವಾ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ ಎಂಬುದು ಹೂಡಿಕೆ ಮತ್ತು ವಿಮೆಯನ್ನು ಸಂಯೋಜಿಸುವ ಒಂದು ರೀತಿಯ ವಿಮಾ ಯೋಜನೆಯಾಗಿದೆ. ವಿಮಾ ಕಂಪನಿಗಳು ವಿಮೆ ನೀಡುವ ಜೊತೆಗೆ ಹೂಡಿಕೆದಾರನಿಗೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಪಾಲಿಸಿದಾರರಿಗೆ ತಮ್ಮ ಹೂಡಿಕೆಯ ಮೇಲೆ ಮಾರುಕಟ್ಟೆ-ಸಂಬಂಧಿತ ಆದಾಯವನ್ನು ಗಳಿಸಲು ಅನುವು ಮಾಡಿಕೊಡುವ ಈ ವಿಮೆಯ ಸಂಪೂರ್ಣ ಮಾಹಿತಿಯನ್ನು ಉದಾಹರಣೆ ಸಮೇತ ವಿಡಿಯೋದಲ್ಲಿ ನೋಡಬಹುದು.
ಕೃಪೆ: Money9 Kannada