ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆದವರು ವೀವ್ಸ್ ಹಾಗೂ ವೈರಲ್ ಆಗಲು ಏನೇನೆಲ್ಲಾ ಹುಚ್ಚಾಟಗಳನ್ನು ನಡೆಸುತ್ತಾರೆ ಎನ್ನುವುದನ್ನು ನೀವೆಲ್ಲರೂ ನೋಡಿದ್ದೀರಾ. ಅದೇ ರೀತಿ ಇಲ್ಲೊಬ್ಬ ಯುವತಿ ದಿಡೀರ್ ಫೇಮಸ್ ಆಗಬೇಕೆಂದು ನಾಯಿ ಮೊಲೆಗೆ ಬಾಯಿ ಹಾಕಿದ್ದಾಳೆ.
ಹೌದು, ಯುವತಿಯೋರ್ವಳು ಯಾರೂ ಮಾಡದ ವಿಚಿತ್ರ ಸಾಹಸಕ್ಕೆ ಕೈಹಾಕಿ ನೆಟ್ಟಿಗರ ಹುಬ್ಬೇರಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಮಲಗಿದ್ದ ನಾಯಿ ಮೊಲೆಗೆ ಬಾಯಿ ಹಾಕಿ ಹಾಲು ಕುಡಿದಿದ್ದಾಳೆ. ಅಲ್ಲದೇ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾಳೆ.
ಈ ವೀಡಿಯೋ ಇದೀಗ ಸಾಕಷ್ಟು ವೈರಲ್ ಆಗಿದ್ದು, ಜನರು ಪ್ರಚಾರ ಗಿಟ್ಟಿಸಿಕೊಳ್ಳಲು ಯಾಕೆ ಈ ರೀತಿ ಹುಚ್ಚಾಟ ಮಾಡ್ತಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅದೃಷ್ಟವಶಾತ್ ಯುವತಿ ಈ ರೀತಿ ಹುಚ್ಚಾಟ ಮಾಡಿದರೂ ಸಹ ನಾಯಿ ಸುಮ್ಮನೇ ಕುಳಿತಿದೆ. ಒಂದು ವೇಳೆ ನಾಯಿ ತಿರುಗಿ ಬಾಯಿ ಹಾಕಿದ್ದರೆ ಯುವತಿ ಪರಿಸ್ಥಿತಿ ಏನಾಗುತ್ತಿತ್ತು ಅನ್ನೋದು ಊಹಿಸಲೂ ಅಸಾಧ್ಯ.