GOOD NEWS: ಈ ಅಂಚೆ ಯೋಜನೆಗೆ ಸೇರಿದರೆ ಕೈಗೆ 8 ಲಕ್ಷ ರೂ; ತಿಂಗಳಿಗೆ 600 ರೂ ಹೂಡಿಕೆ ಮಾಡಿದರೆ ಸಾಕು..!

ಅಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು ಸೂಕ್ತವೆಂದು ಹೇಳಬಹುದು. ಅಂಚೆ ವಿಮಾ ಯೋಜನೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಅವುಗಳಲ್ಲಿ ಗ್ರಾಮ ಸಂತೋಷ್ ವಿಮಾ ಯೋಜನೆ ಕೂಡ ಒಂದು. ಈ…

post office scheme vijayaprabha

ಅಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು ಸೂಕ್ತವೆಂದು ಹೇಳಬಹುದು. ಅಂಚೆ ವಿಮಾ ಯೋಜನೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಅವುಗಳಲ್ಲಿ ಗ್ರಾಮ ಸಂತೋಷ್ ವಿಮಾ ಯೋಜನೆ ಕೂಡ ಒಂದು.

ಈ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೂಲಕ ನೀವು 22 ರೂಗಳೊಂದಿಗೆ 8 ಲಕ್ಷ ರೂ ಪಡೆಯಬಹುದು. ಗ್ರಾಂ ಸಂತೋಷ್ ಎಂಡೋಮೆಂಟ್ ಅಶ್ಯೂರೆನ್ಸ್ ಯೋಜನೆಯಗೆ 19 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರಬಹುದಾಗಿದ್ದು, 55 ವರ್ಷದೊಳಗಿನವರು ಸಹ ಈ ಯೋಜನೆಗೆ ಸೇರಬಹುದು. ಈ ಪಾಲಿಸಿಯನ್ನು ಕನಿಷ್ಠ ರೂ .10,000 ಮೊತ್ತಕ್ಕೆ ಪಡೆಯಬಹುದಾಗಿದ್ದು, ಗರಿಷ್ಠ 10 ಲಕ್ಷ ರೂ.ಗಳಿಗೆ ಪಾಲಿಸಿ ಪಡೆಯಬಹುದು. ಪಾಲಿಸಿಯ ಅವಧಿ 35, 40, 45, 50, 55, 58, 60 ವರ್ಷಗಳಿಗೆ ಇರುತ್ತದೆ.

ಉದಾಹರಣೆಗೆ ನಿಮ್ಮ ವಯಸ್ಸು 25 ಎಂದು ಭಾವಿಸೋಣ. ಪಾಲಿಸಿಯನ್ನು 3 ಲಕ್ಷ ರೂ.ಗಳಿಗೆ ತೆಗೆದುಕೊಂಡಿದ್ದೀರಿ. ಮುಕ್ತಾಯದ ಸಮಯದಲ್ಲಿ ನೀವು ಎಷ್ಟು ಹಣವನ್ನು ಪಡೆಯಬಹುದು ಎಂಬುದನ್ನು ಈಗ ಕಂಡುಹಿಡಿಯೋಣ. 35 ವರ್ಷಗಳು – 4.44 ಲಕ್ಷ ರೂ., 40 ವರ್ಷಗಳು – 5.16 ಲಕ್ಷ ರೂ., 45 ವರ್ಷಗಳು – 5.88 ಲಕ್ಷ ರೂ., 50 ವರ್ಷಗಳು – 6.6 ಲಕ್ಷ ರೂ., 55 ವರ್ಷಗಳು – 7.3 ಲಕ್ಷ ರೂ., 58 ವರ್ಷಗಳು – 7.75 ಲಕ್ಷ ರೂ., 60 ವರ್ಷಗಳು – ರೂ .8.04 ಲಕ್ಷ ಪಡೆಯಬಹುದು.

Vijayaprabha Mobile App free

ಈಗ ಮಾಸಿಕ ಪ್ರೀಮಿಯಂ ವಿಷಯಕ್ಕೆ ಬಂದಾಗ ..
35 ವರ್ಷಗಳ ಅವಧಿ – ರೂ .3518,
40 ವರ್ಷಗಳ ಅವಧಿ – ರೂ .1693,
45 ವರ್ಷಗಳ ಅವಧಿ – ರೂ .1223,
50 ವರ್ಷಗಳ ಅವಧಿ – ರೂ .956,
55 ವರ್ಷಗಳ ಅವಧಿ – ರೂ .768,
58 ವರ್ಷಗಳ ಅವಧಿ – ರೂ .690 ಹಾಗು
60 ವರ್ಷಗಳ ಅವಧಿ – ರೂ .643 ಗಳನ್ನೂ ಕಟ್ಟಬೇಕು

ನೀವು 25 ನೇ ವಯಸ್ಸಿನಲ್ಲಿ ಪಾಲಿಸಿಯನ್ನು ತೆಗೆದುಕೊಂಡರೆ ನೀವು 60 ವರ್ಷದ ನಿವೃತ್ತಿ ಆಯ್ಕೆಯನ್ನು ಆರಿಸಿದರೆ ನೀವು 35 ವರ್ಷದ ಪ್ರೀಮಿಯಂ ಅನ್ನು ಕಟ್ಟಬೇಕು. ಅಂದರೆ ನೀವು ತಿಂಗಳಿಗೆ 643 ರೂ. ದಿನಕ್ಕೆ 22 ರೂ ಉಳಿತಾಯ ಮಾಡಿದರೆ ಸಾಕು. ಮುಕ್ತಾಯದ ಸಮಯಕ್ಕೆ 8.4 ಲಕ್ಷ ರೂ. ಪಡೆಯಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.