ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದ್ದು, ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಪಿಎಂ ಕಿಸಾನ್ ಯೋಜನೆಯ ಭಾಗವಾಗಿ, ಅನ್ನದಾತರಿಗೆ ಪ್ರತಿವರ್ಷ 6,000 ರೂ. ಜಮೆ ಮಾಡಲಾಗುತ್ತಿದೆ.
ವಾರ್ಷಿಕ ಈ 6,000 ರೂಪಾಯಿಗಳು ರೈತರ ಬ್ಯಾಂಕ್ ಖಾತೆಗಳಗೆ ಮೂರು ಕಂತುಗಳಲ್ಲಿ ಅಂದರೆ ರೂ .2,000 ರೂಗಳಂತೆ ಜಮಾ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಪಿಎಂ ಕಿಸಾನ್ ಯೋಜನೆಗೆ ಇನ್ನೂ ಸೇರ್ಪಡೆಗೊಳ್ಳದವರಿಗೆ ಕೂಡ ಇದರ ಲಾಭ ಪಡೆಯಬಹುದು.
ಮೋದಿ ಸರ್ಕಾರ ಈವರೆಗೆ 7 ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ. ನೀವು ಇನ್ನೂ ಯೋಜನೆಗೆ ಸೇರದಿದ್ದರೆ, ಮಾರ್ಚ್ 31 ರೊಳಗೆ ನೋಂದಾಯಿಸಿಕೊಳ್ಳಿ. ನಿಮ್ಮ ಅಪ್ಲಿಕೇಶನ್ ಸರಿಯಾಗಿದ್ದರೆ, ನೀವು ಮಾರ್ಚ್‌ನಲ್ಲಿ 8 ನೇ ಕಂತು ಸ್ವೀಕರಿಸಬಹುದು. ಇದರಂತೆ ಏಪ್ರಿಲ್-ಮೇ ತಿಂಗಳಲ್ಲಿ ಮತ್ತೆ 2,000 ರೂ. ಪಡೆಯಬಹುದು. ಅಂದರೆ ತಕ್ಷಣ ಒಟ್ಟು 4,000 ರೂ. ಸಿಗುತ್ತದೆ.
ನೀವು ಯೋಜನೆಗೆ ಸೇರಲು ಬಯಸಿದರೆ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಿ. ಫಾರ್ಮರ್ಸ್ ಕಾರ್ನರ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ ಆಯ್ಕೆಯನ್ನು ಆರಿಸಿ. ಈಗ ನಿಮ್ಮ ಬಳಿ ಇರುವ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಹೊಲದ ಪಹಣಿಯನ್ನು ಖಚಿತಪಡಿಸಿಕೊಂಡು, ಇವುಗಳ ಸಹಾಯದಿಂದ ನೀವು ಯೋಜನೆಗೆ ಸೇರಬಹುದು.
ಹೆಚ್ಚಿನ ಮಾಹಿತಿಗೆ https://pmkisan.gov.in/ಗೆ ಸಂಪರ್ಕಿಸಬಹುದು.