Tulsi Puja : ಇದು ವೃಂದಾಳ ರೂಪವಾದ ತುಳಸಿ ಹಾಗೂ ವಿಷ್ಣುವಿನ ರೂಪವಾದ ಸಾಲಿಗ್ರಾಮಕ್ಕೂ ವಿವಾಹ (Tulasi Vivaha) ನಡೆದ ದಿನ.
ಹೌದು, ಇವರಿಬ್ಬರ ವಿವಾಹದ ಸಂಕೇತವಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಆಚರಿಸಲಾಗುತ್ತದೆ. ಶ್ರದ್ಧಾ – ಭಕ್ತಿಯಿಂದ ಈ ಪೂಜೆ ಮಾಡಿದರೆ ವೈವಾಹಿಕ ಸಾಮರಸ್ಯ ಮತ್ತು ಆಧ್ಯಾತ್ಮಿಕ ಉನ್ನತಿಯ ಆಶೀರ್ವಾದ ದೊರೆಯುತ್ತದೆ.
Tulsi Puja : ಪೂಜೆಯ ಮುಹೂರ್ತ
- ದೃಕ್ ಪಂಚಾಂಗದ ಪ್ರಕಾರ, ತುಳಸಿ ಪೂಜೆಯನ್ನು ನವೆಂಬರ್ 13 ರಂದು ಬುಧವಾರ ಆಚರಿಸಲಾಗುತ್ತದೆ.
- ದ್ವಾದಶಿ ತಿಥಿ ಆರಂಭ: 2024 ರ ನವೆಂಬರ್ 12 ರಂದು ಸಂಜೆ 4:04 ರಿಂದ
- ದ್ವಾದಶಿ ತಿಥಿ ಮುಕ್ತಾಯ: 2024 ರ ನವೆಂಬರ್ 13 ರಂದು ಮಧ್ಯಾಹ್ನ 1: 01 ರವರೆಗೆ.
ಇದನ್ನೂ ಓದಿ: Panchanga | ಇಂದು ಬುಧವಾರ 13-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
Tulsi Puja ಪೂಜಾ ವಿಧಾನ
ತುಳಸಿ ಪೂಜೆಗಾಗಿ ತುಳಸಿ ಕುಂಡವನ್ನು ಕಬ್ಬಿನ ಚಪ್ಪರ ಅಥವಾ ಮ೦ಟಪದಿ೦ದ ಅಲ೦ಕರಿಸಿ, ಸಗಣಿಯಿಂದ ನೆಲವನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಹಾಕಬೇಕು. ನಂತರ ತುಳಸಿ ಬಳಿ ಸಾಲಿಗ್ರಾಮವನ್ನು ಇಟ್ಟು ತುಳಸಿಯಲ್ಲಿ ಹುಣಸೆ ಕಾಯಿ ಮತ್ತು ನೆಲ್ಲಿಕಾಯಿ ಗಿಡವನ್ನು ಇಡಬೇಕು. ತುಳಸಿಯ ಸುತ್ತ ದೀಪಗಳನ್ನು ಹಚ್ಚಿಡಬೇಕು.
ಹೂವು, ಅರಿಶಿನ, ಕುಂಕುಮದಿಂದ ತುಳಸಿ ಮತ್ತು ಸಾಲಿಗ್ರಾಮಕ್ಕೆ ಅಲಂಕಾರವನ್ನು ಮಾಡಿ, ಹಣ್ಣುಗಳನ್ನು ಇರಿಸಿ, ನೈವೇದ್ಯವನ್ನು ಅರ್ಪಿಸಬೇಕು. ಬಳಿಕ ತುಳಸಿಗೆ ಮತ್ತು ಸಾಲಿಗ್ರಾಮಕ್ಕೆ ಧೂಪ, ದೀಪ, ಆರತಿಯನ್ನು ಮಾಡಿ, ಮನೆಯವರೆಲ್ಲರೂ ತುಳಸಿಗೆ 5 ಅಥವಾ 7 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 13-11-2024 ಬುಧವಾರ
ಪೂಜಾ ಸ್ತೋತ್ರಗಳು
ತುಳಸಿ ಮಂತ್ರ
ತ್ವಂ ಹಿರಣ್ಯಮಯೀ ತ್ವಂ ಚಿ ಪರಮೇಶ್ವರಾಯ। ತವಂ ಶ್ರೀಂ ವಿಶ್ವರೂಪಿಣ್ಯ ಹರಿಣ್ಯಂ ಹರಿವಲ್ಲಭೇ।।
ತುಳಸಿ ವಿವಾಹ ಮಂತ್ರ:
”ಓಂ ತುಂ ತುಳಸಿ ಶಿವಪ್ರಿಯಾ ವಿಷ್ಣುಪ್ರಿಯ ಮಹಾಕ್ರಪಾ ವಿಷ್ಣುಮಯಂ ಪ್ರಣಮ್ಯಹಂ ಹರಿವಿವಾಹಂ ಚ ಬ೦ಧನಂ”
ತುಳಸಿ ಮತ್ತು ಶ್ರೀಕೃಷ್ಣನ ಒಕ್ಕೂಟಕ್ಕಾಗಿ ಮಂತ್ರ:
ಓಂ ನಮಃ ತುಳಸಿ ಕೃಷ್ಣ ವಾಸುದೇವಾಯ
ತುಳಸಿ ಪೂಜೆ ಮಾಡುವುದರ ಪ್ರಯೋಜನವೇನು?
- ಕಾರ್ತಿಕದಲ್ಲಿ ತುಳಸಿ ಪೂಜೆ ಮಾಡಿದರೆ ಪಾಪಗಳು ಕಳೆಯುತ್ತವೆ
- ತುಳಸಿ ಪೂಜೆಯು ಸಂಪತ್ತು & ಸಮೃದ್ಧಿ ಕರುಣಿಸುವುದು
- ವಿಷ್ಣು & ಲಕ್ಷ್ಮಿಯ ಆಶೀರ್ವಾದಕ್ಕಾಗಿ ತುಳಸಿ ಪೂಜೆ ಮಾಡಿ
- ತುಳಸಿ ಪೂಜೆಯಿಂದ ಸಂತಾನ, ಐಶ್ವರ್ಯ ದೊರಕುತ್ತದೆ
- ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ