Tomato price : ಕಳೆದ ಕೆಲ ದಿನಗಳಿಂದ ಟೊಮೆಟೊಗೆ ಭಾರಿ ಬೆಲೆ ಬಂದಿದ್ದು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮತ್ತೆ ಟೊಮೆಟೋ ಬೆಲೆ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ
ಹೌದು, ಮಳೆಯ ಕಾರಣರಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ 80 ರೂ. ಗಡಿ ಮುಟ್ಟಿದೆ. ಪ್ರತಿವರ್ಷ ಕೋಲಾರದಲ್ಲಿ, ಹೊಸಕೋಟೆ, ಸೇರಿದಂತೆ ವಿವಿಧೆಡೆಯಿಂದ ಟೊಮೆಟೊ ಬರುತ್ತಿತ್ತು. ಆದ್ರೆ ಈ ವರ್ಷ ಹೆಚ್ಚು ಮಳೆಯಾಗಿರುವ ಪರಿಣಾಮ ಈ ಭಾಗದಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ.
ಇದನ್ನೂ ಓದಿ: ನಕಲಿ ‘BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್!
ಹೀಗಾಗಿ ಕೆಂಪು ಸುಂದರಿಗೆ ಬೇಡಿಕೆ ಹೆಚ್ಚಾಗಿದೆ. ಹೋಲ್ ಸೇಲ್ ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 50 ರಿಂದ 60 ರೂಪಾಯಿ ಇದ್ರೆ, ರಿಟೈಲ್ ನಲ್ಲಿ 80 ರಿಂದ 90 ರವರೆಗೂ ದರ ಫಿಕ್ಸ್ ಮಾಡಲಾಗಿದ್ದು, ಕೆಲವು ರಾಜ್ಯಗಳಲ್ಲಿ ಕೆಜಿಗೆ 100ರೂ ತಲುಪಿದೆ.
ಬೆಲೆ ನಿಯಂತ್ರಿಸಲು ಕೇಂದ್ರದಿಂದ ಕೆಜಿಗೆ 65ರೂ.ಗೆ ಮಾರಾಟ
ಇನ್ನು, ನಿರಂತರ ಏರುತ್ತಿರುವ ಬೆಲೆ ನಿಯಂತ್ರಿಸಲು ಕೇಂದ್ರವು ಕೆಜಿಗೆ 65ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ. ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ & Safal ನ ಚಿಲ್ಲರೆ ಮಳಿಗೆಗಳ ಮೂಲಕ ಟೊಮೆಟೋ ಕೆಜಿಗೆ 65ಕ್ಕೆ ಮಾರಾಟ ಮಾಡಲಾಗುತ್ತದೆ. ಮೊಬೈಲ್ ವ್ಯಾನ್‌ಗಳ ಮೂಲಕವೂ ಟೊಮೆಟೋ ಮಾರಾಟ ಮಾಡುತ್ತಿದೆ. ಇನ್ನು, ಮಳೆಯಿಂದಾಗಿ ಸಾರಿಗೆಯೂ ದುಬಾರಿಯಾಗಿದೆ.