ಇಂದು ವಿಶ್ವ ಪ್ರವಾಸೋದ್ಯಮ ದಿನ; ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಪ್ರತಾಪ್ ಸಿಂಹ ಸೇರಿದಂತೆ ಹಲವರ ಶುಭಾಶಯ

ಬೆಂಗಳೂರು: ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಮತ್ತು ಮನಸ್ಸಿಗೆ ಖುಷಿ, ಉಲ್ಲಾಸವನ್ನು ನೀಡುವುದಲ್ಲದೆ ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ದೇಶ ಸುತ್ತು-ಕೋಶ ಓದು ಎನ್ನುವ…

World Tourism Day

ಬೆಂಗಳೂರು: ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಮತ್ತು ಮನಸ್ಸಿಗೆ ಖುಷಿ, ಉಲ್ಲಾಸವನ್ನು ನೀಡುವುದಲ್ಲದೆ ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ.

ದೇಶ ಸುತ್ತು-ಕೋಶ ಓದು ಎನ್ನುವ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಂ ಕಾರಂತರು ಹೇಳಿದ ಮಾತು ಸದಾ ನೆನಪಿಗೆ ಬರುತ್ತದೆ. ಏಕೆಂದರೆ ಪ್ರವಾಸದಲ್ಲಿ ಸಿಗುವ ಅನುಭವ, ವಿಚಾರಗಳು ಪುಸ್ತಕ ಓದುವುದಕ್ಕಿಂತಲು ಹೆಚ್ಚಿನ ಅನುಭವ ಸಿಗುತ್ತದೆ ಎಂದರೆ ತಪ್ಪಾಗಲಾರುದು. ಪ್ರವಾಸ ಎಂದರೆ ಅದು ಕೇವಲ ತಿರುಗಾಟ, ಸುತ್ತುವುದು ಅಷ್ಟೇ ಅಲ್ಲ, ಅದು ಒಂದು ಅನುಭವ, ಕಲಿಕೆಯಾಗಿರುತ್ತದೆ.

ವಿಶ್ವ ಪ್ರವಾಸೋದ್ಯಮ ದಿನ ಇಂದು ಪ್ರತಾಪ್ ಸಿಂಹ, ಸಿ.ಟಿ.ರವಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಅರಣ್ಯ ಸಚಿವ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

Vijayaprabha Mobile App free

ವಿಶ್ವ ಪ್ರವಾಸೋದ್ಯಮ ದಿನ ಇಂದು ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದೂ, “ಹಂಪಿಯ ಭವ್ಯ ಪರಂಪರೆ, ಮೈಸೂರಿನ ಸಾಂಸ್ಕೃತಿಕ ವೈಭವ, ಮಲೆನಾಡಿನ ಹಸಿರ ಸೊಬಗು, ಕರಾವಳಿಯ ಸಮುದ್ರ ತೀರಗಳು ಸೇರಿದಂತೆ ಹಲವಾರು ಭವ್ಯ ತಾಣಗಳು ಕರ್ನಾಟಕದಲ್ಲಿವೆ. ನಮ್ಮ ಪ್ರವಾಸೋದ್ಯಮವನ್ನು ಜಗತ್ತಿಗೆ ಪರಿಚಯಿಸಲು ನಮ್ಮ ಸರ್ಕಾರ ಪಣ ತೊಡುತ್ತಿದೆ. ಸರ್ವರಿಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದೂ, ಪ್ರವಾಸೋದ್ಯಮದಲ್ಲಿ ಸುಸ್ಥಿರ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರವಾಸಿತಾಣಗಳ ಸುರಕ್ಷತೆ, ಸ್ವಚ್ಛತೆಯನ್ನು ಕಾಪಾಡೋಣ, ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.

ಅರಣ್ಯ ಸಚಿವ ಆನಂದ್ ಸಿಂಗ್ ಅವರು ಟ್ವೀಟ್ ಮಾಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಶುಭಾಶಯಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.