ಬೆಂಗಳೂರು: ಇಂದು ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯಾಗಿದೆ. ಪ್ರತಿ ಕುಟುಂಬದಲ್ಲಿ ಹೆಣ್ಣು ಮಕ್ಕಳೇ ಮಹಾಲಕ್ಷ್ಮಿಯರು, ಹೀಗೆ ಎಲ್ಲ ಹೆತ್ತವರ ಪಾಲಿಗೂ ಬಲು ಅಕ್ಕರೆ ನೀಡುವ ಮಗಳಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.
ಪ್ರತಿಯೊಬ್ಬರ ಬದುಕಿನಲ್ಲೂ ಹೆಣ್ಣು ಮಕ್ಕಳಿಗೆ ಅವಳದ್ದೇ ಆದ ಸ್ಥಾನವಿದೆ, ಪ್ರತಿ ಹೆತ್ತವರ ಪಾಲಿಗೂ ಮಗಳು ಅಮ್ಮನ ಪ್ರತಿರೂಪ, ಅದರಲ್ಲೂ ತಂದೆಗೆ ತನ್ನ ಮಗಳ ಮೇಲೆ ಒಂದು ಹಿಡಿ ಜಾಸ್ತಿಯೇ ಪ್ರೀತಿ ಇರುತ್ತದೆ, ಪುತ್ರಿ ಎಂಬ ಪದದಲ್ಲೇ ಏನೋ ಒಂದು ದೈವೀಯ ಸೆಳೆತವಿದೆ ಅನಿಸುತ್ತದೆ.
ಭಾರತದಲ್ಲಿ ಸೆಪ್ಟೆಂಬರ್ ನಾಲ್ಕನೇ ಭಾನುವಾರವನ್ನು ಪ್ರತಿವರ್ಷ `ಹೆಣ್ಣು ಮಕ್ಕಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 27ಕ್ಕೆ ಮಗಳ ದಿನಾಚರಣೆ ಬಂದಿದೆ. ಮಗಳು ಮತ್ತು ಹೆತ್ತವರ ಅಪೂರ್ವ ಸಂಬಂಧವನ್ನು ಸಂಭ್ರಮಿಸುವ ಸಲುವಾಗಿ ಈ ದಿನದ ಆಚರಣೆ ಶುರುವಾಗಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಾದ ಇಂದು ಅರೋಗ್ಯ ಸಚಿವ ಶ್ರೀರಾಮುಲು, ಕೃಷಿ ಸಚಿವ ಬಿ.ಸಿ.ಪಾಟೀಲ್, ಜಗದೀಶ್ ಶೆಟ್ಟರ್ , ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದಾರೆ.
ರಾಷ್ಟ್ರೀಯ ಮಗಳ ದಿನದ ಶುಭಾಶಯಗಳು
ಮಗಳು, ಗೆಳತಿ, ಇನ್ನೊಬ್ಬರ ಹೆಂಡತಿ, ತಾಯಿ, ಸೊಸೆ ಮುಂತಾಗಿ ಕುಟುಂಬದಲ್ಲಿ ಆ ಮೂಲಕ ಸಮಾಜದಲ್ಲಿ ಅನೇಕ ಮಹತ್ತರ ಪಾತ್ರಗಳನ್ನು ಅಲಂಕರಿಸುವ ‘ಮಗಳು’ ಎಂಬ ಹೆಮ್ಮೆ ನಮ್ಮೆಲ್ಲರದಾಗಲಿ.#NationalDaughtersDay2020 pic.twitter.com/RpLYuHHSdu
— B Sriramulu (@sriramulubjp) September 27, 2020
ಹೆಣ್ಣು ಮಗಳು ಮನೆಯ ನಂದಾದೀಪ. ಈ ಜಗತ್ತಿನ ಮಹಾನ್ ಶಕ್ತಿ ಹೆಣ್ಣು.
ರಾಷ್ಟ್ರೀಯ ಹೆಣ್ಣು ಮಗಳ ದಿನಾಚರಣೆಯ ಶುಭಾಶಯಗಳು. #DaughtersDay2020 @KarnatakaVarthe @DDChandanaNews pic.twitter.com/iXYNw8YOw4
— Kourava B.C.Patil (@bcpatilkourava) September 27, 2020
ಮಗಳೆಂದರೆ ಮನೆಯ ಸೌಭಾಗ್ಯಲಕ್ಷ್ಮೀ. ಪುತ್ರಿ, ಅಕ್ಕ, ತಂಗಿ, ತಾಯಿಯಾಗಿ ಜೀವನ ತುಂಬುವವಳೂ ಅವಳೇ.
ರಾಷ್ಟ್ರೀಯ ಹೆಣ್ಣು ಮಗಳ ದಿನಾಚರಣೆಯಂದು ಶುಭಾಶಯಗಳು. #DaughtersDay2020 @KarnatakaVarthe @DDChandanaNews pic.twitter.com/ifkDX6r3gU
— Shashikala Jolle (@ShashikalaJolle) September 27, 2020