ಇಂದು ವರ್ಷದ ಮೊದಲ ಚಂದ್ರಗ್ರಹಣ; ಏನಿದು ‘ರೆಡ್ ಬ್ಲಡ್ ಮೂನ್’..!

ಈ ವರ್ಷದ ಮೊದಲ ಚಂದ್ರಗ್ರಹಣವು ಇಂದು ಸಂಭವಿಸಲಿದೆ. ಮಧ್ಯಾಹ್ನ 2.17ಕ್ಕೆ ಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 7.19ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಭಾರತದ ಕೆಲವು ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದ್ದು, ಇದನ್ನು…

ಈ ವರ್ಷದ ಮೊದಲ ಚಂದ್ರಗ್ರಹಣವು ಇಂದು ಸಂಭವಿಸಲಿದೆ. ಮಧ್ಯಾಹ್ನ 2.17ಕ್ಕೆ ಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 7.19ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸಲಿದೆ.

ಆದರೆ, ಭಾರತದ ಕೆಲವು ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದ್ದು, ಇದನ್ನು ಉಪಛಾಯಾ ಗ್ರಹಣ ಎಂದು ಕರೆಯುತ್ತಾರೆ. ಈ ರೀತಿಯ ಚಂದ್ರಗ್ರಹಣದಲ್ಲಿ ಸೂತಕದ ಆಚರಣೆ ಮಾಡಲಾಗುವುದಿಲ್ಲ. ಇನ್ನು, ಮುಂದಿನ ಚಂದ್ರಗ್ರಹಣ ನವೆಂಬರ್ 19ರಂದು ಗೋಚರಿಸಲಿದೆ.

ಏನಿದು ‘ರೆಡ್ ಬ್ಲಡ್ ಮೂನ್‘:

Vijayaprabha Mobile App free

ಇಂದು ಚಂದ್ರಗ್ರಹಣ. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ ದೂರದಲ್ಲೇ ಇರಲಿದ್ದಾನೆ. (ಸರಾಸರಿ ದೂರ 3,84,000 ಕಿ.ಮೀ) ಹಾಗಾಗಿ ಇಂದು ಕಾಣಿಸುವ ಸೂಪರ್ ಮೂನ್ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ.

24 ಅಂಶ ಹೆಚ್ಚು ಪ್ರಭೆಯಿಂದಲೂ, 14 ಅಂಶ ದೊಡ್ಡದಾಗಿಯೂ ಚಂದ್ರ ಇಂದು ಗೋಚರಿಸುತ್ತಾನೆ. ಅಲ್ಲದೆ, ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್‌ ಬ್ಲಡ್‌ ಮೂನ್‌ ಎಂದು ಕರೆಯಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.