ಬೆಂಗಳೂರು: ಸಚಿವ ಸುಧಾಕರ್ ಅವರ ‘ಏಕಪತ್ನಿ ವ್ರತಸ್ಥ’ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ‘ಎಲ್ಲರ ಮನೆ ದೋಸೆನೂ ತೂತೇ, ಯಾರೂ ಕೂಡ ಸತ್ಯ ಹರಿಶ್ಚಂದ್ರರಲ್ಲ’ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಎಲ್ಲರ ಮನೆ ದೋಸೆನೂ ತೂತೇ, ಯಾರೂ ಕೂಡ ಸತ್ಯ ಹರಿಶ್ಚಂದ್ರರಲ್ಲ. ‘ಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೇ ನೀವು ಕೋರ್ಟ್ ಗೆ ಏಕೆ ತಡೆಯಾಜ್ಞೆ ತಂದಿರಿ, ನಾನು ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ’ ಎಂದು ಖಾರವಾಗಿ ಅರೋಗ್ಯ ಸಚಿವ ಸುಧಾಕರ್ ಗೆ ಪ್ರಶ್ನಿಸಿದ್ದಾರೆ.
ಅರೋಗ್ಯ ಸಚಿವ ಸುಧಾಕರ್ ಅವರು, ಎಲ್ಲರೂ ಏಕಪತ್ನೀ ವ್ರತಸ್ಥರೇ, 225 ಶಾಸಕರ ಬಗ್ಗೆಯೂ ತನಿಖೆಯಾಗಲಿ, ಯಾರು ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಾಗಲಿ ಎಂದು ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದರು.
ಇದನ್ನು ಓದಿ: ‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿಕೆ ಶಿವಕುಮಾರ್ ತಿರುಗೇಟು