ಬೆಂಗಳೂರು: ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು, ವಿದ್ವಾಂಸರು, ಸಂಘಟನಕಾರರು,ಅಗ್ರಪಂಕ್ತಿಯ ಲೇಖಕರು. ಅನೇಕ ಕಿರುಹೊತ್ತಗೆಗಳನ್ನು ಬರೆದು ಪ್ರಕಟಿಸಿದ ಇವರ ‘ಭಾರತದ ಅರ್ಥ ನೀತಿ-ಒಂದು ದಿಕ್ಕು’ & ‘ಏಕಾತ್ಮ ಮಾನವವಾದ’ ಗ್ರಂಥ ಇವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೂ ಆಗಿರುವ ಇವರ ಪುಣ್ಯಸ್ಮರಣೆ ಇಂದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ನಮ್ಮೆಲ್ಲರ ಬದುಕಿನ ಉದ್ದೇಶವಾಗಿರಬೇಕು ಎಂದು ತಿಳಿಸಿಕೊಟ್ಟ ಮಹಾನ್ ವ್ಯಕ್ತಿತ್ವ ಇವರದು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಂಸದ ಜಿಎಂ ಸಿದ್ದೇಶ್ವರ್, ಕೆ ಎಸ್ ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಗಣ್ಯರು ದೀನದಯಾಳ್ ಅವರನ್ನು ಸ್ಮರಿಸಿದ್ದಾರೆ.
ದೀನದಯಾಳ್ ಅವರನ್ನು ನೆನಪಿಸಿಕೊಂಡ ಶಿಕ್ಷಣ ಸಚಿವ:
ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ‘1968ರ ಫೆಬ್ರವರಿ 11ರಂದು, ನಾವು ಈ ಮಹಾನ್ ಹೃದಯವಂತನನ್ನು ಕಳೆದುಕೊಂಡೆವು. ಇಂದು ಅವರ ಸಂಸ್ಮರಣಾ ದಿನ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ನಮ್ಮೆಲ್ಲರ ಬದುಕಿನ ಉದ್ದೇಶವಾಗಿರಬೇಕು ಎಂದು ತಿಳಿಸಿಕೊಟ್ಟ ಪಂಡಿತ ದೀನದಯಾಳ್ ಉಪಾಧ್ಯಾಯರಿಗೆ ಈ ಸಮರ್ಪಣಾ ದಿನದಂದು ನನ್ನ ಶ್ರದ್ಧಾಪೂರ್ಣ ನಮನಗಳು’ ಎಂದು ತಿಳಿಸಿದ್ದಾರೆ.
1968 ರ ಫೆಬ್ರವರಿ 11 ರಂದು, ನಾವು ಈ ಮಹಾನ್ ಹೃದಯವಂತ ನನ್ನು ಕಳೆದುಕೊಂಡೆವು. ಇಂದು ಅವರ ಸಂಸ್ಮರಣಾ ದಿನ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ನಮ್ಮೆಲ್ಲರ ಬದುಕಿನ ಉದ್ದೇಶ ವಾಗಿರಬೇಕು ಎಂದು ತಿಳಿಸಿಕೊಟ್ಟ
#ಪಂಡಿತ_ದೀನದಯಾಳ್_ಉಪಾಧ್ಯಾಯರಿಗೆ ಈ ಸಮರ್ಪಣಾ ದಿನದಂದು ನನ್ನ ಶ್ರದ್ಧಾಪೂರ್ಣ ನಮನಗಳು. pic.twitter.com/jSyK6qIDLp
— S.Suresh Kumar, Minister – Govt of Karnataka (@nimmasuresh) February 11, 2021




