ಮೃತ ಕೊರೋನಾ ವಾರಿಯರ್ಸ್‌ಗೆ ವಿಮೆ; ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ಧಾರಿಯಿಂದ ನುಣುಚಿಕೊಂಡಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಕೋವಿಡ್ ಕಾರ್ಯದಲ್ಲಿ ತೊಡಗಿ ಮೃತರಾದ ಕೊರೋನಾ ವಾರಿಯರ್ಸ್‌‌ಗೆ ರಾಜ್ಯ ಸರ್ಕಾರ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ ಎಂದು ಕೆಪಿಸಿಸಿ ಅಂಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್…

dinesh gundu rao vijayaprabha

ಬೆಂಗಳೂರು: ಕೋವಿಡ್ ಕಾರ್ಯದಲ್ಲಿ ತೊಡಗಿ ಮೃತರಾದ ಕೊರೋನಾ ವಾರಿಯರ್ಸ್‌‌ಗೆ ರಾಜ್ಯ ಸರ್ಕಾರ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ ಎಂದು ಕೆಪಿಸಿಸಿ ಅಂಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಕೋವಿಡ್ ಕಾರ್ಯದಲ್ಲಿ ತೊಡಗಿ ಮೃತರಾದ ಕೊರೋನಾ ವಾರಿಯರ್ಸ್‌‌ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಮೆ ಪಾವತಿಸದಿರುವದು ಹೇಯ ನಡವಳಿಕೆ. ‘ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ’ಯ ಪ್ರಕಾರ ಕೇಂದ್ರ ಸರ್ಕಾರ ವಿಮೆ ನೀಡುವುದಾಗಿ ಘೋಷಿಸಿ ಈಗ ಹಿಂದೆ ಸರಿದಿದೆ. ಕೇಂದ್ರ ಇಂತಹ ಸುಳ್ಳು ಘೋಷಣೆಯ ಯೋಜನೆ ತರುವುದು ಯಾವ ಪುರುಷಾರ್ಥಕ್ಕೆ.?

ಮೃತ ಕೊರೋನಾ ವಾರಿಯರ್ಸ್‌ಗೆ ವಿಮೆ ನೀಡುವ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ಧಾರಿಯಿಂದ ನುಣುಚಿಕೊಂಡಿದೆ.ಇತ್ತ ರಾಜ್ಯ ಸರ್ಕಾರವೂ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ. ಹಾಗಾದರೆ ಈ ಎರಡು ಸರ್ಕಾರಗಳ ದೃಷ್ಟಿಯಲ್ಲಿ ಕೋವಿಡ್ ರೋಗದ ವಿರುದ್ಧ ಹೋರಾಡಿ ಮೃತರಾದ ವಾರಿಯರ್ಸ್ ಜೀವಗಳಿಗೆ ಬೆಲೆಯೇ ಇಲ್ಲವೆ? ಎಂದು ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.