ದುಬೈ: ಕರೋನವನ್ನು ಎದುರಿಸಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಸೀಸನ್ ಇಂದು ಕೊನೆಗೊಳ್ಳಲಿದೆ. 52 ದಿನಗಳು, 59 ಪಂದ್ಯಗಳು, 723 ಸಿಕ್ಸರ್‌ಗಳು, 656 ವಿಕೆಟ್‌ಗಳು, 5 ಶತಕಗಳು, 107 ಅರ್ಧಶತಕಗಳು, 4 ಸೂಪರ್ ಓವರ್‌ಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದ ಲೀಗ್ ಪಂದ್ಯಗಳು ಪ್ರಶಸ್ತಿ ಹಂತಕ್ಕೆ ತಲುಪಿದ್ದು ಇಂದು ರೋಚಕ ಕ್ಷಣಗಳಿಗೆ ಕೊನೆಗೊಳ್ಳಲಿದೆ.
ಹಲವು ಅಡೆತಡೆಗಳನ್ನು ನಿವಾರಿಸಿ ಮೊದಲ ಬಾರಿಗೆ ಫೈನಲ್‌ಗೆ ತಲುಪಿದ ದೆಹಲಿ ಕ್ಯಾಪಿಟಲ್ಸ್, ಇದುವರೆಗೆ ಆರು ಬಾರಿ ಫೈನಲ್‌ಗೆ ತಲುಪಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ದೀಪಾವಳಿ ಹಬ್ಬಕ್ಕೆ ಮೊದಲು ‘ಪಂಚ್ ಪಟಾಕಿ’ ಸ್ಫೋಟಿಸಲು ನೋಡುತ್ತಿದೆ. ಮತ್ತು ಮೊದಲ ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದು, ಈ ಬಿಗ್‌ಫೈಟ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದುನೋಡಬೇಕಾಗಿದೆ.
ಎರಡು ತಂಡದ ಬಲಾಬಲ:
ಪ್ರಶಸ್ತಿಗಾಗಿ ಕಾಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್, ಸ್ಟೊಯಿನಿಸ್, ಅಯ್ಯರ್ ಮತ್ತು ರಬಾಡಾ ಅವರಂತಹ ಆಟಗಾರರನ್ನು ನಂಬಿಕೊಂಡಿದೆ. ಕಳೆದ ಪಂದ್ಯದಲ್ಲಿ ಪೃಥ್ವಿ ಷಾ ಅವರನ್ನು ಬದಲಿಸಿ ಓಪನರ್ ಆಗಿ ಬಂದ ಸ್ಟೋನಿಸ್, ಉತ್ತಮ ಇನ್ನಿಂಗ್ಸ್ ಆಟವಾಡಿ ಎದುರಾಳಿ ತಂಡದ ಪ್ರಮುಖ ೩ ವಿಕೆಟ್ಗಳನ್ನು ತೆಗೆದುಕೊಂಡು ತಂಡಕ್ಕೆ ಅದ್ಭುತ ಜಯ ತಂದು ಕೊಟ್ಟಿದ್ದರು.
ಇನ್ನು ಸೂರ್ಯಕುಮಾರ್ ಯಾದವ್ ಮತ್ತು ಇಶಾಂತ್ ಕಿಶನ್ ಮುಂಬೈ ಇಂಡಿಯನ್ಸ್‌ಗೆ ಪ್ರಮುಖ ಶಕ್ತಿಯಾಗಿದ್ದಾರೆ. ಹಿಟ್ಮ್ಯಾನ್ ರೋಹಿತ್ ಶರ್ಮ ತಕ್ಕ ಮಟ್ಟಕ್ಕೆ ಆಡದಿದ್ದರೂ ಮುಂಬೈ ತಂಡ ಅದ್ಬುತ ಆಟಗಾರರನ್ನು ಹೊಂದಿದ್ದು ಸಮತೋಲನದಿಂದ ಕೂಡಿದೆ. ಇನ್ನು ಡಿಕಾಕ್ , ಹಾರ್ದಿಕ್ ಪಾಂಡ್ಯ ಹಾಗು ಪೊಲಾರ್ಡ್ ಅವರಂತಹ ಬ್ಯಾಟ್ಸಮನ್ ಗಳು ತಂಡದಲ್ಲಿದ್ದಾರೆ. ಇನ್ನು ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಅವರಂತಹ ಬೌಲರ್ ಗಳನ್ನೂ ಹೊಂದಿದ್ದು, ಮುಂಬೈ ಐದನೇ ಬಾರಿಗೆ ಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ.
ತಂಡದ ಸಂಭಾವ್ಯ ಪಟ್ಟಿ:
ಮುಂಬೈ ಇಂಡಿಯನ್ಸ್ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಸೌರಬ್ ತಿವಾರಿ, ಜೇಮ್ಸ್ ಪ್ಯಾಟಿನ್ಸನ್, ಧವಲ್ ಕುಲಕರ್ಣಿ, ಆದಿತ್ಯ ತಾರೆ, ಮಿಚೆಲ್ ಮೆಕ್‌ಕ್ಲೆನಾಘನ್, ಕ್ರಿಸ್ ಲಿನ್, ಜಯಂತ್ ಯಾದವ್, ಅಂಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಮೊಹ್ಸಿನ್ ಖಾನ್, ಶೆರ್ಫೇನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈ.
ದೆಹಲಿ ಕ್ಯಾಪಿಟಲ್ಸ್ ಸ್ಕ್ವಾಡ್: ಶಿಖರ್ ಧವನ್, ಮಾರ್ಕಸ್ ಸ್ಟೊಯಿನಿಸ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸನಾಯಕ), ರಿಷಭ್ ಪಂತ್ (ಕೀಪರ್), ಶಿಮ್ರಾನ್ ಹೆಟ್ಮಿಯರ್, ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಮೋಹಿತ್ ಶರ್ಮಾ, ಅಲೆಕ್ಸ್ ಕ್ಯಾರಿ, ಅವೇಶ್ ಖಾನ್, ಸಂದೀಪ್ ಲಮಿಚಾನೆ, ಕೀಮೋ ಪಾಲ್, ತುಷಾರ್ ದೇಶಪಾಂಡೆ, ಲಲಿತ್ ಯಾದವ್, ಪ್ರವೀಣ್ ದುಬೆ, ಹರ್ಷಲ್ ಪಟೇಲ್.