ಆಧಾರ್ ಪ್ಯಾನ್ ಲಿಂಕ್: ಭಾರತೀಯ ನಾಗರಿಕರಿಗೆ ಪ್ಯಾನ್ ಕಾರ್ಡ್(Pan Card) ಮತ್ತು ಆಧಾರ್ ಕಾರ್ಡ್ (Adhar Card) ಅತ್ಯಂತ ಪ್ರಮುಖ ದಾಖಲೆಗಳು ಎಂದು ತಿಳಿದಿದೆ. ಬಹುತೇಕ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ. ಇದು ಗುರುತಿನ ಚೀಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ.. ಪ್ಯಾನ್ ಕಾರ್ಡ್.. ಬ್ಯಾಂಕಿಂಗ್ ಸೇವೆಗಳು ಮತ್ತು ಇತರ ಹಣಕಾಸು ವಹಿವಾಟುಗಳಿಗೆ ಖಂಡಿತವಾಗಿಯೂ ಅಗತ್ಯವಿದೆ. ಆದ್ದರಿಂದಲೇ ಈ ಎರಡನ್ನೂ ಜೋಡಿಸಬೇಕು ಎಂದು ಸರ್ಕಾರ ಸದಾ ಹೇಳುತ್ತಲೇ ಬಂದಿದ್ದು, ಮಾರ್ಚ್ 31 ಕೊನೆಯ ದಿನಾಂಕ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಈ ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಒಟ್ಟು 61 ಕೋಟಿ ಪ್ಯಾನ್ ಕಾರ್ಡ್‌ಗಳಲ್ಲಿ 48 ಕೋಟಿ ಪ್ಯಾನ್ ಕಾರ್ಡ್‌ಗಳು ಇನ್ನೂ ಆಧಾರ್‌ನೊಂದಿಗೆ ಲಿಂಕ್ (PAN card link status with Aadhaar card) ಆಗಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಬಹಿರಂಗಪಡಿಸಿದೆ.
ಇದನ್ನು ಓದಿ: ನಿಮ್ಮ ಪ್ಯಾನ್ ಕಾರ್ಡ್ಅನ್ನು ಆಧಾರ್ ಜೊತೆ ತಕ್ಷಣವೇ ಲಿಂಕ್ ಮಾಡಿ; ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ..?
ಆದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸುವುದು ಉತ್ತಮ. ನಿಮ್ಮ ಕಾರ್ಡ್‌ಗಳು ನಿಜವಾಗಿಯೂ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯದೆ ಗೊಂದಲಕ್ಕೀಡಾಗಬೇಡಿ. ಇಲ್ಲವಾದರೆ ಸ್ವಲ್ಪ ನಿರ್ಲಕ್ಷ್ಯವಹಿಸಿದರು ನಿಮ್ಮ ಪಾನ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ. ಆದರೆ ಈ ಲಿಂಕ್ ಮಾಡುವ ಸ್ಥಿತಿಯನ್ನು ತಿಳಿದುಕೊಳ್ಳುವುದು ತುಂಬಾ ಸರಳವಾದ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯಲ್ಲೆ ಕುಳಿತು ಇದನ್ನು ಆನ್‌ಲೈನ್‌ನಲ್ಲಿ ಮಾಡಬಹುದು.
ಇದನ್ನು ಓದಿ: ಮರಣದ ನಂತರ ಗುರುತಿನ ಚೀಟಿಗಳು ಏನಾಗುತ್ತವೆ; ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಬಗ್ಗೆ ಮಹತ್ವದ ಮಾಹಿತಿ
ಮನೆಯಲ್ಲೆ ಕುಳಿತು ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್ ಚೆಕ್ ಮಾಡಿ:
ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ www.incometax.gov.in ಗೆ ಹೋಗಿ.
ಅಲ್ಲಿ ನೀವು ಮೇಲಿನ ಹೆಡರ್‌ನಲ್ಲಿ ತ್ವರಿತ ಲಿಂಕ್‌ಗಳ ಆಯ್ಕೆಯನ್ನು ನೋಡಬಹುದು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಯ್ಕೆ ಇದೆ. ಅದರ ಮೇಲೆ ಕ್ಲಿಕ್ ಮಾಡಿ
ನಂತರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ.
ಈ ವಿವರಗಳನ್ನು ನಮೂದಿಸಿದ ನಂತರ.. View Link Aadhaar Status ಮೇಲೆ ಕ್ಲಿಕ್ ಮಾಡಿ.
ಆಗ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ. ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ನ ಕೆಲವು ಸಂಖ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.
ಇದನ್ನು ಓದಿ: ವಿಚ್ಛೆದಿತ ಖ್ಯಾತ ನಟನೊಂದಿಗೆ ಪತಿ ಕಳೆದುಕೊಂಡ ಖ್ಯಾತ ನಟಿಯ ಮದುವೆ: ಧನುಷ್,ಮೀನಾ ಮದುವೆ ಬಗ್ಗೆ ಸ್ಪೋಟಕ ಮಾಹಿತಿ..!
ಪ್ಯಾನ್ ಕಾರ್ಡ್ ಬಳಕೆದಾರರೇ ಎಚ್ಚರ; ಈ ರೀತಿ ಮಾಡಿದರೆ 10,000 ರೂ. ದಂಡ
ನವದೆಹಲಿ: ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಹೊಂದಿರಬೇಕು. ಪ್ಯಾನ್ ಕಾರ್ಡ್ನಲ್ಲಿ ಏನೇ ಲೋಪವಾದರೂ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹೀಗಾಗಿ ಏನೇ ಸಮಸ್ಯೆಯಾದರೂ ತಕ್ಷಣವೇ ಇಲಾಖೆಯ ಗಮನಕ್ಕೆ ತರುವುದು ಅಗತ್ಯ. ಪ್ಯಾನ್ ಕಾರ್ಡ್‌ನ ತಪ್ಪು ವಿವರಗಳನ್ನು ನೀಡಿದರೆ ಐಟಿ ಕಾಯ್ದೆಯ ಸೆಕ್ಷನ್ 272ಬಿ ಅನ್ವಯ 10,000 ರೂ. ದಂಡ ವಿಧಿಸಲಾಗುತ್ತದೆ.
ಇದನ್ನು ಓದಿ: ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್