Saving money | ಪ್ರತಿ ತಿಂಗಳು ಹಣ ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಉತ್ತಮ ಸಲಹೆಗಳು

Saving money : ಉಳಿತಾಯವು (Savings) ಒಂದು ಅತ್ಯುತ್ತಮ ಅಭ್ಯಾಸವಾಗಿದ್ದು, ನಿಮ್ಮ ಆರ್ಥಿಕ ಭದ್ರತೆಯನ್ನು (Financial Security) ಖಚಿತಪಡಿಸಿಕೊಳ್ಳಲು ನೀವು ಆರಂಭದಲ್ಲಿಯೇ ರೂಢಿಸಿಕೊಳ್ಳಬೇಕು. ಬಜೆಟ್ ಮತ್ತು ಹಣವನ್ನು ಪ್ರತಿ ತಿಂಗಳು (save money every…

Tips to Saving money every month

Saving money : ಉಳಿತಾಯವು (Savings) ಒಂದು ಅತ್ಯುತ್ತಮ ಅಭ್ಯಾಸವಾಗಿದ್ದು, ನಿಮ್ಮ ಆರ್ಥಿಕ ಭದ್ರತೆಯನ್ನು (Financial Security) ಖಚಿತಪಡಿಸಿಕೊಳ್ಳಲು ನೀವು ಆರಂಭದಲ್ಲಿಯೇ ರೂಢಿಸಿಕೊಳ್ಳಬೇಕು. ಬಜೆಟ್ ಮತ್ತು ಹಣವನ್ನು ಪ್ರತಿ ತಿಂಗಳು (save money every month) ಹೇಗೆ ಉಳಿಸುವುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ

Saving money : ಪ್ರತಿ ತಿಂಗಳು ಹಣ ಉಳಿತಾಯ ಮಾಡಲು ಇಲ್ಲಿದೆ ಉತ್ತಮ ಸಲಹೆಗಳು

Saving money

  1. ಸ್ಮಾರ್ಟ್ ಶಾಪಿಂಗ್ ಮಾಡಿ
  2. ಹೊರಗೆ ತಿನ್ನುವುದನ್ನು ಕಡಿಮೆ ಮಾಡಿ
  3. ನೋಟಿಫಿಕೇಷನ್‌ಗಳನ್ನು ಆಫ್‌ ಮಾಡಿ
  4. ಅತಿಯಾದ ಬ್ರಾಂಡ್ ಬಳಕೆ ಬೇಡ
  5. ಕೂಪನ್, ಪ್ರೊಮೋಷನಲ್ ಕೋಡ್‌ಗಳನ್ನು ಬಳಸಿ
  6. ಹೂಡಿಕೆ ಮಾಡಿ
  7. ವಿದ್ಯುತ್ ಬಿಲ್‌, ಜಿಮ್

ಇದನ್ನೂ ಓದಿ: Krishi Bhagya Yojana | ರೈತರಿಗೆ ವರದಾನವಾದ ಕೃಷಿ ಭಾಗ್ಯ ಯೋಜನೆ ; ಏನಿದರ ಉದ್ದೇಶ? ಅರ್ಜಿ ಸಲ್ಲಿಸುವುದು ಹೇಗೆ?

Vijayaprabha Mobile App free

1. ಸ್ಮಾರ್ಟ್ ಶಾಪಿಂಗ್ ಮಾಡಿ

ಬಟ್ಟೆ, ಪೀಠೋಪಕರಣ & ದಿನಸಿ ವಸ್ತುಗಳನ್ನು ಖರೀದಿಸುವಾಗ ಅಗತ್ಯಗಳನ್ನು ಗಮನಿಸಿ ಖರೀದಿಸಿ. ಸೆಕೆಂಡ್ ಹ್ಯಾಂಡ್ ಆಯ್ಕೆಗಳು, ಮಾರಾಟ, ಕ್ಲಿಯರೆನ್ಸ್ ಸಮಯದಲ್ಲಿ ಶಾಪಿ೦ಗ್ ಮಾಡಿ & ಖರೀದಿ ಮಾಡುವ ಮೊದಲು ಆನ್ ಲೈನ್‌ನಲ್ಲಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಿ. ಮುಖ್ಯವಾಗಿ ರಿಯಾಯಿತಿ ದರದಲ್ಲಿರುವ (Discount Rates) ಉತ್ಪನ್ನಗಳನ್ನು ಆಯ್ಕೆ ಮಾಡಿ

2. ಹೊರಗೆ ತಿನ್ನುವುದನ್ನು ಕಡಿಮೆ ಮಾಡಿ

ಪ್ರತಿನಿತ್ಯ ಹೊರಗಿನ ತಿಂಡಿಗಳಿಗೆ ಹಣ ವ್ಯಯಿಸುವ ಬದಲು ಅಪರೂಪಕ್ಕೆ ಒಮ್ಮೆ ಹೊರಗಡೆ ತಿನ್ನಿ. ತಾಜಾ ತರಕಾರಿಗಳು ಅಥವಾ ಹಣ್ಣುಗಳನ್ನು ಖರೀದಿ ಮಾಡಿ ಸ್ವತಃ ನೀವು ಆಹಾರ ತಯಾರು ಮಾಡಿ, ಕುಟು೦ಬದೊಟ್ಟಿಗೆ ಸವಿಯಿರಿ. ಇದರಿಂದ ಸಾಕಷ್ಟು ಹಣ ಉಳಿಸಬಹುದು.

3. ನೋಟಿಫಿಕೇಷನ್‌ಗಳನ್ನು ಆಫ್‌ ಮಾಡಿ

ಮೊಬೈಲ್ ನೋಟಿಫಿಕೇಷನ್‌ಗಳು (Mobile Notifications) ಆರ್ಫ ಗಳನ್ನು ತೋರಿಸುವ ಮೂಲಕ ಹೆಚ್ಚು ಹಣ ಖರ್ಚಾಗುವಂತೆ ಮಾಡುತ್ತವೆ. ಆಫರ್‌ಗಳನ್ನು ನೋಡಿದಾಗ ಬೇಡವೆಂದರೂ ಹಣ ಖರ್ಚಾಗುತ್ತದೆ. ಇದಕ್ಕಾಗಿ ನೋಟಿಫಿಕೇಶನ್ ಆಫ್ (Notification of) ಮಾಡಿ ಇಡುವುದು ಉತ್ತಮ ಪರಿಹಾರ.

ಇದನ್ನೂ ಓದಿ: Gruha Arogya Yojana | ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಈ ಯೋಜನೆಯ ಉದ್ದೇಶ, ಪ್ರಯೋಜನಗಳು

4. ಅತಿಯಾದ ಬ್ರಾಂಡ್ ಬಳಕೆ ಬೇಡ

ನೀವು ಬ್ರಾಂಡೆಡ್ ವಸ್ತುಗಳನ್ನೇ (Branded Items) ಬಳಸುವುದು ಎ೦ದಾದರೆ ಇದರಲ್ಲಿ ಒ೦ದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಬ್ರಾ೦ಡೆಂಡ್ ವಸ್ತುಗಳನ್ನು ಆಫರ್ ಇರುವಾಗ ಖರೀದಿಸಬಹುದು ಅಥವಾ ಬ್ರಾಂಡೆಡ್ ವಸ್ತುಗಳನ್ನು ಆಫರ್‌ನಲ್ಲಿ ಮಾರಾಟ ಮಾಡುವ ಔಟ್‌ಲೆಟ್‌ಗಳನ್ನು ಹುಡುಕಿ ಖರೀದಿ ಮಾಡಿ.

5. ಕೂಪನ್, ಪ್ರೊಮೋಷನಲ್ ಕೋಡ್‌ಗಳನ್ನು ಬಳಸಿ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್, ಡೆಬಿಟ್, ಮೊಬೈಲ್ ಅಪ್ಲಿಕೇಷನ್‌ಗಳಲ್ಲಿ ಕೂಪನ್ ಕೋಡ್‌ಗಳು (Coupon Codes) ಲಭ್ಯವಾಗುತ್ತವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಭ್ಯಾಸ ಮಾಡಿ. ಇದರಿಂದ ಕೂಡ ಹಣ ಉಳಿತಾಯ ಮಾಡಬಹುದು.

ಇದನ್ನೂ ಓದಿ: UPI Payment | ತಪ್ಪಾಗಿ ತಪ್ಪು ಸಂಖ್ಯೆಗೆ UPI ಪಾವತಿ ಮಾಡಿರುವಿರಾ? ನೋ ಟೆನ್ಶನ್.. 48 ಗಂಟೆಯಲ್ಲಿ ಹೀಗೆ ರಿಟರ್ನ್!

6. ಹೂಡಿಕೆ ಮಾಡಿ

ಉಳಿತಾಯ ಮಾಡುತ್ತಿರುವ ಹಣವು ದ್ವಿಗುಣಗೊಳ್ಳಲು ಹೂಡಿಕೆ (Investment) ಮಾಡುವುದು ಉತ್ತಮ. ಈಗಾಗಲೇ ಹೂಡಿಕೆ ಮಾಡಿರುವ ನಿಮ್ಮ ಸ್ನೇಹಿತರ ಸಲಹೆಯನ್ನು ಪಡೆದು, ಹೂಡಿಕೆ ಮಾಡಿ. ಪ್ರತಿದಿನದ ಖರ್ಚಿನ ಪಟ್ಟಿಯನ್ನು ಒಂದು ಬುಕ್‌ನಲ್ಲಿ ಬರೆದಿಡಿ. ಎಲ್ಲಿ ಜಾಸ್ತಿ ಖರ್ಚಾಗುತ್ತಿದೆ ಎಂಬುದನ್ನು ಲೆಕ್ಕಾಚಾರ ಹಾಕಿ ಖರೀದಿಯನ್ನು ಮಿತಿಗೊಳಿಸಿ.

7. ವಿದ್ಯುತ್ ಬಿಲ್‌, ಜಿಮ್

ಅನವಶ್ಯಕವಾಗಿ ವಿದ್ಯುತ್‌ ದೀಪಗಳನ್ನು ಆನ್ ಮಾಡುವುದು, ಹೊರಗೆ ಹೋಗುವ ಸಮಯದಲ್ಲಿ ಫ್ಯಾನ್, ದೀಪಗಳನ್ನು ಆರಿಸಿ ಹೋಗುವುದನ್ನು ಮರೆಯಬೇಡಿ. ಜಿಮ್‌ಗೆ ಹೋಗುವ ಬದಲು ಮನೆಯಲ್ಲೇ ವರ್ಕ್‌ಔಟ್, ಯೋಗ, ವ್ಯಾಯಾಮ ಮಾಡಿ.

ಇದನ್ನೂ ಓದಿ: Online transaction | ಆನ್‌ಲೈನ್ ವಹಿವಾಟು ಎಂದರೇನು? ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ಪಾರಾಗಲು ಹೀಗೆ ಮಾಡಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.