Online transaction | ಆನ್‌ಲೈನ್ ವಹಿವಾಟು ಎಂದರೇನು? ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ಪಾರಾಗಲು ಹೀಗೆ ಮಾಡಿ!

Online transaction :  ಆನ್‌ಲೈನ್ ವಹಿವಾಟುಗಳು ಹಣವನ್ನು ವಿದ್ಯುನ್ಮಾನವಾಗಿ RTGS , IMPS, NEFT , UPI, ಕಾರ್ಡ್‌ಗಳು ಮತ್ತು ಅಂತಹುದೇ ವಿಧಾನಗಳಂತಹ ಆಯ್ಕೆಗಳನ್ನು ಬಳಸಿಕೊಂಡು ವರ್ಗಾವಣೆ ಮಾಡುವ ಪಾವತಿ ವಿಧಾನವಾಗಿದೆ.  ಇದು ಅಂತರ್ಜಾಲದ…

online transaction

Online transaction :  ಆನ್‌ಲೈನ್ ವಹಿವಾಟುಗಳು ಹಣವನ್ನು ವಿದ್ಯುನ್ಮಾನವಾಗಿ RTGS , IMPS, NEFT , UPI, ಕಾರ್ಡ್‌ಗಳು ಮತ್ತು ಅಂತಹುದೇ ವಿಧಾನಗಳಂತಹ ಆಯ್ಕೆಗಳನ್ನು ಬಳಸಿಕೊಂಡು ವರ್ಗಾವಣೆ ಮಾಡುವ ಪಾವತಿ ವಿಧಾನವಾಗಿದೆ. 

ಇದು ಅಂತರ್ಜಾಲದ ಮೂಲಕ ಎರಡು ಅಥವಾ ಹೆಚ್ಚಿನ ಜನರ ನಡುವೆ ಹಣವನ್ನು ವಿನಿಮಯ ಮಾಡುವ ಪ್ರಕ್ರಿಯೆಯಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವುದು ಮತ್ತು ಮಾರಾಟ ಮಾಡುವುದು, ಬಿಲ್‌ಗಳನ್ನು ಪಾವತಿಸುವುದು, ಹಣವನ್ನು ವರ್ಗಾಯಿಸುವುದು ಹೀಗೆ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: PM Kisan | ರೈತರಿಗಾಗಿಯೇ ಕೇಂದ್ರದ ಈ ಸ್ಕೀಮ್; ಈ ಒಂದು ಕೆಲಸ ಮಾಡಿದರೆ ಖಾತೆಗೆ ಹಣ; ಸಂಪೂರ್ಣ ವಿವರಗಳು ಇಲ್ಲಿವೆ

Vijayaprabha Mobile App free

Online transaction : ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ಪಾರಾಗಲು ಹೀಗೆ ಮಾಡಿ!

online transaction

ಆನ್​ಲೈನ್ ಶಾಪಿಂಗ್ ಅಥವಾ ವಹಿವಾಟು ನಡೆಸುವ ವೇಳೆ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪಾಸ್​ವರ್ಡ್​​ಗಳನ್ನು ಬಳಸಿ ವಹಿವಾಟು ನಡೆಸುವ ಬದಲು ಬಯೋಮೆಟ್ರಿಕ್ ಆಧಾರಿತ ವ್ಯವಹಾರ ನಡೆಸುವುದು ಒಳ್ಳೆಯದು.ಉತ್ತಮವಾಗಿರುತ್ತದೆ.

ಏಕೆಂದರೆ ಪಾಸ್​ವರ್ಡ್​​ಗಳನ್ನು ಹ್ಯಾಕ್ ಮಾಡುವುದು ಸುಲಭ.ಸುಲಭವಾಗಿದೆ. ಅಪರಿಚಿತ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬೇಡಿ.ಮಾಡಬಾರದು. ಬೇರೆಯವರಿಗೆ ರಿಮೋಟ್ ಆ್ಯಕ್ಸೆಸ್ ನೀಡಬೇಡಿ.ನೀಡಬಾರದು. ಸಾರ್ವಜನಿಕ ಮತ್ತು ಉಚಿತವಾಗಿ ಸಿಗುವ ವೈಫೈ ಸಂಪರ್ಕ ಬಳಸಬೇಡಿ. ಇವುಸಂಪರ್ಕಗಳನ್ನು ಬಳಸಬಾರದು. ಇವುಗಳಲ್ಲಿ ಗೌಪ್ಯ ಮಾಹಿತಿ ಕದಿಯುವ ಸಾಧ್ಯತೆ ಇದೆ. ಇರುತ್ತದೆ.

ಇದನ್ನೂ ಓದಿ: ವೃತ್ತಿ ಪ್ರೋತ್ಸಾಹ ಸಾಲ ಯೋಜನೆ | ರೂ.1,00,000 ವರೆಗೆ ಉಚಿತ ಸಾಲ? ಉದ್ದೇಶ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ

Online transaction : ತಪ್ಪಾದ ಆನ್‌ಲೈನ್‌ ವಹಿವಾಟಿನ ಸಂದರ್ಭದಲ್ಲಿ ಹಣ ವಾಪಸ್ ಪಡೆಯುವುದು ಹೇಗೆ?

ಹಣವನ್ನು ವರ್ಗಾಯಿಸುವಾಗ ಆನ್‌ಲೈನ್‌ ವಹಿವಾಟಿನಲ್ಲಿ ತಪ್ಪು ಆಗಬಹುದು ಅಥವಾ ವರ್ಗಾವಣೆಯಲ್ಲಿ ವಂಚನೆ ಆಗಬಹುದು. ಹೀಗಾದಾಗ ನೀವು ತಪ್ಪಾಗಿ ಹಣ ಹಾಕಿದವರನ್ನು ಸಂಪರ್ಕಿಸಿ. ಹಣ ಸ್ವೀಕರಿಸಿದವರು ಹಣವನ್ನು ಹಿಂತಿರುಗಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಕಾನೂನು ಮೊಕದ್ದಮೆ ಹೂಡಬಹುದು.

ಇಲ್ಲವೇ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಮತ್ತು ನಿಮ್ಮ ಹಣವನ್ನು ತಪ್ಪು ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿ. ಖಾತೆ ಸಂಖ್ಯೆ, ಖಾತೆದಾರರ ಹೆಸರು, ಸಮಯ, ದಿನಾಂಕ ಇತ್ಯಾದಿಗಳಂತಹ ವಿವರಗಳನ್ನು ನಮೂದಿಸಿ.

ಇದನ್ನೂ ಓದಿ: ಉಚಿತ ವಿದ್ಯುತ್‌ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ; ಉದ್ದೇಶ, ಪ್ರಯೋಜನಗಳು, ಅರ್ಜಿ ಸಲ್ಲಿಕೆ

Online transaction : ಭಾರತದಲ್ಲಿ ಮೊಬೈಲ್ ಆನ್‍ಲೈನ್ ವಹಿವಾಟು ಏರಿಕೆ

ಭಾರತದಲ್ಲಿ ಮೊಬೈಲ್ ಆನ್‌ಲೈನ್ ವಹಿವಾಟು ಹೆಚ್ಚಳವಾಗಿದೆ. ಇದರೊಂದಿಗೆ ಆನ್‌ಲೈನ್ ವಹಿವಾಟು ತಾಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, 2022ರಲ್ಲಿ ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ಪ್ರಿಪೇಡ್ ಕಾರ್ಡ್‌ಗಳ ಮೂಲಕ ಒಟ್ಟು 145.5 ಟ್ರಿಲಿಯನ್ ರೂಪಾಯಿ ಮೊತ್ತದ 87.92 ಬಿಲಿಯನ್ ಆನ್‌ಲೈನ್ ಪೇಮೆಂಟ್ ವಹಿವಾಟುಗಳು ನಡೆದಿವೆ ಎಂದು ವರದಿಯೊಂದು ತಿಳಿಸಿದೆ. 2022ರಲ್ಲಿ ಯುಪಿಐ 74.05 ಶತಕೋಟಿ ಸಂಖ್ಯೆಯ ವ್ಯವಹಾರಗಳನ್ನು ಮತ್ತು ರೂ 126 ಟ್ರಿಲಿಯನ್ ಮೌಲ್ಯದ ವಹಿವಾಟುಗಳನ್ನು ನಡೆಸಿದೆ.

ಇದನ್ನೂ ಓದಿ: Udyogini yojana | ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಉಚಿತ ಲೋನ್ ಹೇಗೆ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Online transaction : ಆನ್‌ಲೈನ್‌ ವಂಚನೆ ಆದರೆ ಹಣದ ರಿಕವರಿ ಹೇಗೆ ನಡೆಯುತ್ತದೆ?

ರಾಜ್ಯದಲ್ಲಿ ಆನ್‌ಲೈನ್ ಅಥವಾ ಸೈಬರ್ ವಂಚನೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸೈಬರ್ ವಂಚಕರು ಆನ್‌ಲೈನ್‌ ನಲ್ಲಿ ವಿವಿಧ ಸ್ವರೂಪದಲ್ಲಿ ಹಲವರಿಗೆ ಪಂಗನಾಮ ಹಾಕಿದ್ದಾರೆ.

ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಡಿಜಿಪಿ ಶ್ರೇಣಿಯ ಹುದ್ದೆಯನ್ನು ಸೃಷ್ಟಿಸಲಾಗಿದೆ. ಇನ್ನು ಸೈಬರ್ ವಂಚನೆಗೊಳಗಾದವಂಚನೆಗೆ ಒಳಗಾದ ಶೋಷಿತರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್ ಪೊಲೀಸ್ ಠಾಣೆಗಳನ್ನು ಆರಂಭ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೃಪೆ – Zee Kannada News

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.