Tungabhadra Dam gate | ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯಕ್ಕೆ ಮುಹೂರ್ತ ಫಿಕ್ಸ್

Tungabhadra Dam gate | ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 33 ಗೇಟ್​ಗಳನ್ನು ನವೆಂಬರ್​ನಿಂದ ಬದಲಾಯಿಸುವ ಕಾರ್ಯ ಆರಂಭವಾಗಲಿದೆ. ಹೌದು, ತುಂಗಭದ್ರಾ ಜಲಾಶಯ 4 ಜಿಲ್ಲೆಗಳ ಜೀವನಾಡಿ.…

Tungabhadra Dam gate

Tungabhadra Dam gate | ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 33 ಗೇಟ್​ಗಳನ್ನು ನವೆಂಬರ್​ನಿಂದ ಬದಲಾಯಿಸುವ ಕಾರ್ಯ ಆರಂಭವಾಗಲಿದೆ.

ಹೌದು, ತುಂಗಭದ್ರಾ ಜಲಾಶಯ 4 ಜಿಲ್ಲೆಗಳ ಜೀವನಾಡಿ. ಈ ಜೀವನಾಡಿ ಇದೀಗ ಅಪಾಯದಂಚಿನಲ್ಲಿದೆ. ಕಳೆದ ವರ್ಷ ಒಂದು ಗೇಟ್ ಕಿತ್ತುಕೊಂಡು ಹೋಗಿತ್ತು. ಸದ್ಯ ಆ ಗೇಟ್‌ನ್ನು ತಾತ್ಕಾಲಿಕವಾಗಿ ಅಳವಡಿಕೆ ಮಾಡಲಾಗಿದೆ. ಸರ್ಕಾರ ಜಲಾಶಯದ ಗೇಟ್ ಯಾವಾಗ ಬದಲಾವಣೆ ಮಾಡುತ್ತೆ ಎಂದು ಕಾದು ಕುಳಿತ್ತಿದ್ದ ರೈತರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.

ನವೆಂಬರ್‌ನಿಂದ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಆರಂಭವಾಗಲಿದೆ. ಇದರೊಂದಿಗೆ ನದಿ ಪಾತ್ರದ ಜನರಿಗೆ ಮತ್ತು ರೈತರಿಗೆ ದೊಡ್ಡ ಅಪಾಯವೊಂದು ತಪ್ಪಿದಂತಾಗಲಿದೆ.

Vijayaprabha Mobile App free

ಇನ್ನು, ಸಚಿವ ಶಿವರಾಜ್ ತಂಗಡಗಿ ಅವರು ಗೇಟ್ ಬದಲಾವಣೆ ಕಾರ್ಯ ಆರಂಭವಾಗುವ ಬಗ್ಗೆ ತಿಳಿಸಿದ್ದರೂ, ಈ ಬಾರಿ ಕೇವಲ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆ ಎಂದು ಹೇಳಿದ್ದಾರೆ. ಇದರಿಂದ ರೈತರು ಆತಂಕಗೊಂಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.