Manmohan Singh : ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇಂದು ಬೆಳಗ್ಗೆ 11.45ಕ್ಕೆ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಅಂತ್ಯಕ್ರಿಯೆ (Funeral) ನಡೆಯಲಿದ್ದು, ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ.
ಪಾಕಿಸ್ತಾನದಲ್ಲಿ ಜನನ
ಇ೦ದು ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್‌ನ ಗಾಹ್ವನಲ್ಲಿ ಮನಮೋಹನ್ ಸಿಂಗ್ ಸಾಂಪ್ರದಾಯಿಕ ಸಿಖ್ ಕುಟುಂಬದಲ್ಲಿ ಜನಿಸಿದರು. ಬಳಿಕ ಅವರ ಕುಟುಂಬವು 1947 ರಲ್ಲಿ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬ೦ದಿತು. ಅವರು ಚಿಕ್ಕವರಿದ್ದಾಗಲೇ ತಾಯಿ ತೀರಿಕೊ೦ಡ ಹಿನ್ನೆಲೆ ಅಜ್ಜಿಯ ಮುದ್ದಿನ ಮೊಮ್ಮಗರಾಗಿ ಬೆಳೆದರು.
ಇದನ್ನೂ ಓದಿ: Manmohan Singh funeral | ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
ಮೇಧಾವಿ ಪ್ರಧಾನಿ ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ ಅವರನ್ನು ವಿಶ್ವದ ಅತ್ಯಂತ ಮೇಧಾವಿ ಪ್ರಧಾನಿ ಎಂದು ಹೊಗಳಲಾಗುತ್ತಿದ್ದು, ಈವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳ ಪ್ರಧಾನಿ ಪಟ್ಟ ಅಲ೦ಕರಿಸಿದವರು ಯಾರೂ ಅವರಷ್ಟು ಶಿಕ್ಷಣ ಪಡೆದಿಲ್ಲ. ಅಲ್ಲದೆ ಅರ್ಥಶಾಸ್ತ್ರದಲ್ಲಿ ಇವರ ಕೊಡುಗೆಗೆ ಒಟ್ಟು 14 ಗೌರವ ಡಿ.ಲಿಟ್ ಪದವಿ ಸಂದಿದೆ.
ಒಬಾಮಾಗೆ ಆಪ್ತಮಿತ್ರ ಮನಮೋಹನ್ ಸಿಂಗ್
ಮನಮೋಹನ ಸಿಂಗ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸ್ನೇಹ ವಿಶೇಷವಾಗಿದ್ದು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಅಮೆರಿಕಕ್ಕೆ ಒಬಾಮಾ ಅಧ್ಯಕ್ಷರಾಗಿದ್ದರು. 2008ರಲ್ಲಿ ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸ೦ಭವಿಸಿದಾಗ ಭಾರತದ ಮೇಲೆ ಪರಿಣಾಮ ಬೀರಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಸಿಂಗ್ ಅವರು ತೆಗೆದುಕೊಂಡ ಕ್ರಮಗಳು ಒಬಾಮಾ ಅವರಲ್ಲಿ ಅಚ್ಚರಿ ಮೂಡಿಸಿದ್ದವು.
ಇದನ್ನೂ ಓದಿ: Holiday | ಕೇಂದ್ರ ಸರ್ಕಾರಿ ನೌಕರರಿಗೆ ಇಂದು ಅರ್ಧ ದಿನ ರಜೆ
2 ಬಾರಿ ಬೈಪಾಸ್ ಸರ್ಜರಿ
ಮನಮೋಹನ್ ಸಿಂಗ್ ಹೃದ್ರೋಗ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. 1990ರಲ್ಲಿ ಲಂಡನ್‌ನಲ್ಲಿ ಮೊದಲ ಬಾರಿಗೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊ೦ಡಿದ್ದರು. 2004ರಲ್ಲಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಂಡಿದ್ದರು. 2009 ರಲ್ಲಿ ಪ್ರಧಾನಿಯಾಗಿದ್ದಾಗ ದೆಹಲಿಯ ಏಮ್ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮೌನಮೋಹನ ಸಿಂಗ್
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರ ಮೌನದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಯಾವುದೇ ನಾಯಕರು ಟೀಕೆ ಮಾಡಿದರೂ ಅದಕ್ಕೆ ಉತ್ತರ ಕೊಡಲು ಇವರು ಹೋಗುತ್ತಿರಲಿಲ್ಲ. ಪ್ರತಿಪಕ್ಷ ಬಿಜೆಪಿ ನಾಯಕರು ಮನಮೋಹನ್ ಸಿಂಗ್ ಅವರಿಗೆ ‘ಮೌನ’ಮೋಹನ್ ಸಿಂಗ್ ಎಂದು ಕರೆಯುವ ಮೂಲಕ ಲೇವಡಿ ಕೂಡ ಮಾಡಿದ್ದರು.
ಇದನ್ನೂ ಓದಿ: ಅಪರೂಪ ನಾಯಕ ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ, ಸಾಧನೆ, ದೇಶಕ್ಕೆ ನೀಡಿದ ಕೊಡುಗೆಗಳಿವು
ರಿಸರ್ವ್ ಬ್ಯಾಂಕ್ ಗವರ್ನರ್
ಮನಮೋಹನ್ ಸಿಂಗ್ ಅವರು ಪ್ರಧಾನಿ, ಹಣಕಾಸು ಸಚಿವರಾಗುವ ಮುನ್ನ ಆರ್‌ಬಿಐನ ನಿರ್ದೇಶಕರಾಗಿದ್ದರು. ಬಳಿಕ ಏಷ್ಯಾ ಅಭಿವೃದ್ಧಿ ಬ್ಯಾಂಕಿನ (ಎಡಿಬಿ) ನಿರ್ದೇಶಕ ಮಂಡಳಿಗೆ ಸೇರಿದ್ದು, 1977ರಿಂದ 1980 ರವರೆಗೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡರು. 1982ರಲ್ಲಿ ಆರ್ ಬಿಐ ಗವರ್ನರ್ ಹುದ್ದೆಗೆ ಏರಿದ್ದರು.