Manmohan Singh funeral : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Manmohan Singh) ಅವರ ಅಂತ್ಯಕ್ರಿಯೆ (Funeral) ಇಂದು ಬೆಳಗ್ಗೆ 11.45ಕ್ಕೆ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ (Union Home Ministry) ಪ್ರಕಟಿಸಿದೆ.
ಇದನ್ನೂ ಓದಿ: Holiday | ಕೇಂದ್ರ ಸರ್ಕಾರಿ ನೌಕರರಿಗೆ ಇಂದು ಅರ್ಧ ದಿನ ರಜೆ
ಹೌದು, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸೇನಾ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಲು ರಕ್ಷಣಾ ಇಲಾಖೆಯನ್ನು (Defence Ministry) ಕೋರಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮನಮೋಹನ್ ಸಿಂಗ್ ಸ್ಮಾರಕ ಸ್ಥಾಪಿಸಲು ವಿಶೇಷ ಸ್ಥಳ ಮಂಜೂರು ಮಾಡುವಂತೆ AICC ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.