Ravichandran Ashwin | ಭಾರತದ ಸ್ಪಿನ್ ಮಾಂತ್ರಿಕ ಅಶ್ವಿನ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಶೇಷ ವಿಷಯಗಳು

Ravichandran Ashwin : ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದು, ಸ್ಪಿನ್ ಮಾಂತ್ರಿಕ ಅಶ್ವಿನ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಶೇಷ ವಿಷಯಗಳು ಇಲ್ಲಿವೆ ತಾಯಿಯ ಪ್ರೇರಣೆ…

Ravichandran Ashwin

Ravichandran Ashwin : ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದು, ಸ್ಪಿನ್ ಮಾಂತ್ರಿಕ ಅಶ್ವಿನ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಶೇಷ ವಿಷಯಗಳು ಇಲ್ಲಿವೆ

ತಾಯಿಯ ಪ್ರೇರಣೆ

ಅಶ್ವಿನ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಉತ್ತುಂಗಕ್ಕೇರಲು ಅವರ ತಾಯಿಯ ಶ್ರಮವೂ ಬಹಳಷ್ಟಿದ್ದು, ತನ್ನ ತಾಯಿಯ ಸಲಹೆಯ ಮೇರೆಗೆ ಅಶ್ವಿನ್, ಬ್ಯಾಟಿಂಗ್ ಜೊತೆಗೆ ಆಫ್ ಸ್ಪಿನ್ನರ್ ತರಬೇತಿ ಪಡೆಯಲು ಆರಂಭಿಸಿದರು. ಅಶ್ವಿನ್ ಆಫ್ ಸ್ಪಿನ್ನರ್ ಆಗಲು ಪ್ರಮುಖ ಕಾರಣವೇ ಅವರ ತಾಯಿ.

ಇದನ್ನೂ ಓದಿ: Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ನಿವೃತ್ತಿ!

Vijayaprabha Mobile App free

ಉದ್ಯೋಗದ ಆಫ‌ರ್

ಚೆನ್ನೈನ ಎಸ್‌ಎಸ್‌ಎನ್‌ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಗ್ರಿ ಪದವಿಯನ್ನು ಪಡೆದಿದ್ದ ಅಶ್ವಿನ್ ಕ್ಯಾಂಪಸ್ ಇಂಟರ್ವ್ಯೂ ಮೂಲಕ ಕೊಗ್ನಿಜೆಂಟ್ ಟೆಕ್ನಾಲಜಿಯಲ್ಲಿ ಕೆಲಸದ ಆಫರ್ ಕೂಡಾ ಪಡೆದುಕೊಂಡಿದ್ದರು. ಆ ವೇಳೆಗೆ ಬಹುರಾಷ್ಟ್ರೀಯ ಕಂಪೆನಿಯ ಆಫರ್ ಲೆಟರ್ ಮತ್ತು ಐಪಿಎಲ್ ಆಫರ್ ಈ ಎರಡೂ ಇದ್ದ ಏಕೈಕ ಕ್ರಿಕೆಟಿಗರಾಗಿದ್ದರು.

ಕ್ಯಾರಂ ಬಾಲ್

2007ರಲ್ಲಿ ಕಾರ್ತಿಕ್ ಶೇಖರ್ ಎನ್ನುವ ವ್ಯಕ್ತಿಯಿಂದ ಅವಮಾನಕ್ಕೆ ಒಳಗಾಗಿ, ಅವರಿಂದಲೇ ಕ್ಯಾರಂ ಬಾಲ್ ಕಲೆಯನ್ನು ಅಶ್ವಿನ್ ಕಲಿತುಕೊಂಡಿದ್ದರು. ಎಡಗೈ ಹೆಬ್ಬೆರಳು ಮತ್ತು ಪಕ್ಕದ ಬೆರಳಿನಿಂದ ಸ್ಪಿನ್ ಮಾಡುವ ಅಶ್ವಿನ್, ಹಲವು ಪಂದ್ಯಗಳಲ್ಲಿ ಬ್ಯಾಟರುಗಳಿಗೆ ಇಂತಹ ಬೌಲ್ ನಿಂದ ಕಾಡಿದ್ದರು.

537 ವಿಕೆಟ್

ಅಶ್ವಿನ್ ಭಾರತದ ಪರ 106 ಟೆಸ್ಟ್ ಮ್ಯಾಚ್ ಆಡಿ, 537 ವಿಕೆಟ್ ಉರುಳಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಬ್ಯಾಟಿಂಗ್‌ನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 6 ಶತಕ ಗಳಿಸಿ 14 ಅರ್ಧಶತಕ ಬಾರಿಸಿದ್ದಾರೆ. ಜೊತೆಗೆ 116 ಏಕದಿನ & 65 ಟಿ-20 ಮ್ಯಾಚ್ ಆಡಿ ಮಿ೦ಚಿದ್ದರು.

ಇದನ್ನೂ ಓದಿ: WPL Mini Auction | WPL ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ

ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ವಿಕೆಟ್

ಅಶ್ವಿನ್‌ ಅವರು ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ 100 ರನ್ ಮತ್ತು 5 ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದ್ದಾರೆ. ಇದು ಅತ್ಯಂತ ವಿಶೇಷ ಸಾಧನೆಯಾಗಿದೆ. ಈ ಮೂಲಕ ಅವರು ಉತ್ತಮ ಆಲ್‌ರೌಂಡರ್‌ಎಂಬುದನ್ನು ಸಹ ತೋರಿಸಿಕೊಟ್ಟಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.