Diwali : ಮನೆಯಲ್ಲಿ ನಿಂತ ಗಡಿಯಾರ, ಮುರಿದ ಪ್ರತಿಮೆಗಳು, ಒಡೆದ ಪೀಠೋಪಕರಣಗಳು ಸೇರಿದಂತೆ ಈ ವಸ್ತುಗಳಿದ್ದರೆ ತಪ್ಪದೆ ದೀಪಾವಳಿಯ ಮುನ್ನ ಹೊರಹಾಕಿ.
Diwali : ನಿಂತ ಗಡಿಯಾರ (Stop clock)
ಮನೆಯಲ್ಲಿ ನಿಂತ ಅಥವಾ ಓಡದ ಗಡಿಯಾರವಿದ್ದರೆ ಅದನ್ನು ಮನೆಯಿಂದ ತಪ್ಪದೆ ಹೊರಹಾಕಬೇಕು. ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮನೆಯವರ ಪ್ರಗತಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಈ ದೀಪಾವಳಿಯ ನಂತರ ನೀವು ಯಶಸ್ವಿಯಾಗಲು ಬಯಸಿದರೆ, ನಿ೦ತ ಗಡಿಯಾರವನ್ನು ಮನೆಯಿ೦ದ ತೆಗದು ಹಾಕಿ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 30-10-2024 ಬುಧವಾರ
ಮುರಿದ ಪ್ರತಿಮೆಗಳು
ಮನೆಯಲ್ಲಿ ದೇವತೆಗಳ ವಿಗ್ರಹಗಳು, ಕಲಾತ್ಮಕ ವಿಗ್ರಹಗಳು ಮುರಿದಿದ್ದರೆ ತಡಮಾಡದೆ ತಕ್ಷಣ ಅವುಗಳನ್ನು ತೆಗೆದುಹಾಕಬೇಕು. ಹೌದು, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಬೇಕು ಎಂದಾದರೆ, ದೀಪಾವಳಿಯ ಮುನ್ನ ನಿಮ್ಮ ಮನೆಯಿಂದ ಮುರಿದ ವಿಗ್ರಹಗಳನ್ನು ಹೊರಗೆ ಹಾಕಿ.
ಒಡೆದ ಪೀಠೋಪಕರಣಗಳು
ಯಾರ ಮನೆಯಲ್ಲಿ ಒಡೆದ ಪೀಠೋಪಕರಣಗಳು ಇರುತ್ತವೆಯೋ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಅಲ್ಲದೆ ಮುರಿದ ಮರದ ಪೀಠೋಪಕರಣಗಳು ಮನೆಯ ನಿವಾಸಿಗಳ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ ಇಂತಹ ಒಡೆದ ಪೀಠೋಪಕರಣಗಳನ್ನು ದೀಪಾವಳಿಗೂ ಮುನ್ನ ಮನೆಯಿ೦ದ ಹೊರಹಾಕುವುದು ಒಳ್ಳೆಯದು.
ಹಾನಿಯಾದ ಕಬ್ಬಿಣದ ವಸ್ತುಗಳು
ಒಡೆದ ಅಥವಾ ಹಾನಿಗೊಳಗಾಗದ ಕಬ್ಬಿಣದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ರಾಹು ಮತ್ತು ಕೇತುಗಳ ದುಷ್ಪರಿಣಾಮಗಳು ಹೆಚ್ಚಾಗುತ್ತವೆ. ಜೊತೆಗೆ ಇಂತಹ ವಸ್ತುಗಳು ಮನೆಯಲ್ಲಿದ್ದರೆ ಹಣ ಮತ್ತು ಆರೋಗ್ಯಕ್ಕೆ ಸ೦ಬ೦ಧಿಸಿದ ಹೆಚ್ಚಿನ ಸಮಸ್ಯೆಗಳು ಎದುರಾಗಬಹುದಾಗಿದ್ದು, ದೀಪಾವಳಿಯ ಮೊದಲು ಮುರಿದ ಅಥವಾ ಹಾನಿಗೊಳಗಾದ ಕಬ್ಬಿಣದ ವಸ್ತುಗಳನ್ನು ಹೊರ ಹಾಕಿ.
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
ಹಳೆಯ ಚಪ್ಪಲಿಗಳು
ಹರಿದ ಮತ್ತು ಹಳೆಯ ಚಪ್ಪಲಿಗಳು ಅಥವಾ ಉಪಯೋಗಿಸದ ಚಪ್ಪಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗುತ್ತದೆ. ಆದ್ದರಿಂದ ಉಪಯೋಗಿಸದ ಚಪ್ಪಲಿ ಮತ್ತು ಬೂಟುಗಳನ್ನು ಮನೆಯಿ೦ದ ಹೊರಹಾಕಿ. ಹರಿದ ಚಪ್ಪಲಿಗಳನ್ನು ಸಹಾ ಇಟ್ಟುಕೊಳ್ಳಬೇಡಿ
ಒಡೆದ ಗಾಜು
ಒಡೆದ ಗಾಜುಗಳನ್ನು ಮನೆಯಲ್ಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಗಾಜನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಮನೆಯವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಒಡೆದ ಗಾಜು ಇದ್ದರೆ ದೀಪಾವಳಿಗೂ ಮುನ್ನ ಎಸೆದು ಬಿಡಿ.