ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ದಿನದ ವಹಿವಾಟಿನ ಅಂತ್ಯಕ್ಕೆ ಇದೇ ಮೊದಲ ಬಾರಿಗೆ 80ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಹೌದು, ಕೇಂದ್ರ ಸರ್ಕಾರ ಆಕಸ್ಮಿಕ ಲಾಭ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ವಿತ್ತೀಯ ಕೊರತೆಯು ಹೆಚ್ಚಾಗಬಹುದು ಎಂಬ ಕಳವಳ ವ್ಯಕ್ತವಾಗಿದ್ದು ರೂಪಾಯಿ ಮೌಲ್ಯ ಕುಸಿತಕ್ಕೆ ಇದು ಒಂದು ಕಾರಣವಾಯಿತು ಎಂದು ತಜ್ಞರು ಹೇಳಿದ್ದು, ಬುಧವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯವು ಡಾಲರ್ ಎದುರು 80.05ಕ್ಕೆ ತಲುಪಿದೆ.
ನಿಮ್ಮ ಜೇಬು ಖಾಲಿಯಾಗುವುದು ಗ್ಯಾರಂಟಿ!
ಡಾಲರ್ ಎದುರು ರೂಪಾಯಿ 80.05ಕ್ಕೆ ತಲುಪಿದ್ದು, ಅದು ಮುಂದೆ 85 ರೂ.ವರೆಗೂ ತಲುಪುವ ಸಾಧ್ಯತೆ ಇದೆ ಎಂದು ಕೆಲವು ಬ್ರೋಕರೇಜ್ ಸಂಸ್ಥೆಗಳು ಎಚ್ಚರಿಸಿವೆ.
ಆದರೆ ಇದು ನಮಗೆ ತಿಳಿಯದೆ ನಮ್ಮ ದೈನಂದಿನ ಜೀವನಕ್ಕೆ ಭಾರೀ ಹೊರೆಯಾಗುತ್ತಿದ್ದು, ಈ ಪರಿಣಾಮಗಳಿಂದ ಪೆಟ್ರೋಲ್, ಮೊಬೈಲ್, ಬಟ್ಟೆ, ಅಡುಗೆ ಎಣ್ಣೆ, ಬಣ್ಣಗಳು, ವಿಮಾನ ದರಗಳು, ವಿದೇಶಿ ಶಿಕ್ಷಣ ಮತ್ತು ಆಮದು ಸರಕುಗಳ ಬೆಲೆಗಳು ಹೆಚ್ಚಾಗುತ್ತವೆ.




