ದಾವಣಗೆರೆ : ರಾಜ್ಯದಲ್ಲಿ ಈಗಾಗಲೇ ಕರೋನ ಎರಡನೇ ಅಲೆ ಜೋರಾಗಿದ್ದು, ಇದರ ಜೊತೆ ಈಗ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹುಟ್ಟಿಕೊಂಡಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಪೌಲ್ಟ್ರಿ ಫಾರಂವೊಂದರಲ್ಲಿ ಕಳೆದ 8 ದಿನಗಳಲ್ಲಿ 8 ಸಾವಿರ ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಸುತ್ತಮುತ್ತಲಿನ ಜನರಿಗೆ ಇದೀಗ ಹಕ್ಕಿಜ್ವರದ ಭೀತಿ ಶುರುವಾಗಿದ್ದು, ತಕ್ಷಣವೇ ಅರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಇನ್ನು ಫಾರಂ ಮಾಲೀಕ ಕೋಳಿಗಳ ಸಾವಿನ ಬಗ್ಗೆ ಪಶು ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ರಾತ್ರೋ ರಾತ್ರಿ ಸತ್ತ ಕೋಳಿಗಳ ವಿಲೇವಾರಿ ಮಾಡಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಸರ್ಕಾರದಿಂದ ಜನತೆಗೆ ಬಿಗ್ ಶಾಕ್: ಹೊಸ BPL ಕಾರ್ಡ್ ನೀಡುವ ಪ್ರಕ್ರಿಯೆ ಸ್ಥಗಿತ