ಕೇಂದ್ರ ಸರ್ಕಾರ ಅನ್ನದಾತರಿಗೆ ಮತ್ತೆ ಒಳ್ಳೆಯ ಸುದ್ದಿಯೊಂದನ್ನು ನೀಡಿದ್ದು ,ಪಿಎಂ ಕಿಸಾನ್ ಯೋಜನೆಯಡಿ ಈಗಾಗಲೇ 7 ಕಂತುಗಳನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದು, ಈಗ 8 ನೇ ಕಂತಿನ ಹಣವನ್ನು ಒದಗಿಸಲು ಸಿದ್ಧವಾಗಿದೆ. ವರದಿಗಳ ಪ್ರಕಾರ, ಮಾರ್ಚ್ ಅಂತ್ಯದ ವೇಳೆಗೆ ಈ ಹಣ ರೈತರಿಗೆ ಲಭ್ಯವಾಗಲಿದೆ.
ಮೋದಿ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 6,000 ರೂ. ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಣವನ್ನು ಏಕಕಾಲಕ್ಕಿಂತ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ. ಅಂದರೆ ರೈತರಿಗೆ ಪ್ರತಿ ಕಂತಿನಡಿ 2,000 ರೂ. ಸಿಗುತ್ತದೆ. ಈಗ 8 ನೇ ಕಂತಿನ ಹಣ ಬರುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ದೇಶಾದ್ಯಂತ 11.27 ಕೋಟಿ ರೈತರು ಲಾಭ ಪಡೆಯುತ್ತಿದ್ದಾರೆ. ನೀವು ಇನ್ನೂ ಯೋಜನೆಗೆ ಸೇರದಿದ್ದರೆ, ಈಗಲೂ ಕೂಡ ಸೇರಬಹುದು. ಅಥವಾ ನೀವು ಈಗಾಗಲೇ ಸೇರಿದ್ದು, ನಿಮಗೆ ಹಣ ಬರದಿದ್ದರೆ, ಎಲ್ಲಿ ತಪ್ಪು ಸಂಭವಿಸಿದೆ ಎಂದುದನ್ನು ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ತಿಳಿದುಕೊಳ್ಳಬೇಕು. ಇದಕ್ಕಾಗಿ ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದು.
ಒಮ್ಮೆ ನೀವು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಫಾರ್ಮರ್ಸ್ ಕಾರ್ನರ್ ಎಂದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಫಲಾನುಭವಿ ಸ್ಥಿತಿ (ಬೆನಿಫಿಷಿಯರಿ ಸ್ಟೇಟಸ್) ಆಯ್ಕೆಯನ್ನು ಆರಿಸಿ. ಹೊಸ ಪುಟ ತೆರೆಯುತ್ತದೆ. ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು. ಆಗ ನಿಮ್ಮ ಸ್ಥಿತಿ(ಸ್ಟೇಟಸ್) ವಿವರಗಳು ತಿಳಿಯುತ್ತದೆ.
ಇದನ್ನು ಓದಿ: ಅನ್ನದಾತರಿಗೆ ಒಳ್ಳೆಯ ಸುದ್ದಿ: ರೈತರಿಗೆ ಪ್ರತಿವರ್ಷ 36,000 ರೂ; ಕೈ ಯಿಂದ ಒಂದು ರೂಪಾಯಿ ಕಟ್ಟುವ ಅಗತ್ಯವಿಲ್ಲ!