ನಿಮ್ಮ ಬಳಿ ಕಾರ್ ಇದೆಯಾ? ಬೈಕು ಅಥವಾ ಸ್ಕೂಟರ್ ಹೊಂದಿದ್ದೀರಾ? ಇವುಗಳು ಸಹ ಇಲ್ಲದಿದ್ದರೆ ಭಾರವಾದ ವಾಹನಗಳು ಇದೆಯೇ? ನೀವು ಯಾವ ವಾಹನವನ್ನು ಓಡಿಸುತ್ತಿರಲಿ, ನೀವು ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಯಾವುದೇ ದಾಖಲೆಗಳು ಹಳೆಯದಾಗಿದ್ದರೆ, ಅವುಗಳನ್ನು ನವೀಕರಿಸಿ.
ವಾಹನ ದಾಖಲೆಗಳು (ವೆಹಿಕಲ್ ಡಾಕ್ಯುಮೆಂಟ್) ಅಥವಾ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಯನ್ನು ಮಾರ್ಚ್ 31 ರೊಳಗೆ ನವೀಕರಿ (ರಿನಿವಲ್)ಸಬೇಕು. ಇಲ್ಲದಿದ್ದರೆ ಭಾರೀ ದಂಡ ಭರಿಸಬೇಕಾಗುತ್ತದೆ. ಕರೋನಾ ವೈರಸ್‌ನಿಂದಾಗಿ ವಾಹನ ದಾಖಲೆಗಳನ್ನು ನವೀಕರಿಸಲು ಕೇಂದ್ರ ಸರ್ಕಾರ ಮಾರ್ಚ್ 31 ರ ಗಡುವು ನೀಡಿದೆ. ಈ ಮಧ್ಯೆ ರಿನಿವಲ್ ಮಾಡಿಸಿಕೊಂಡಿದ್ದರೆ ಸರಿ. ಇಲ್ಲದಿದ್ದರೆ ಭಾರೀ ದಂಡ ಭರಿಸಬೇಕಾಗುತ್ತದೆ.
ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್), ಫಿಟ್‌ನೆಸ್ ಪ್ರಮಾಣಪತ್ರ, ವಾಹನ ನೋಂದಣಿ ಮುಂತಾದ ದಾಖಲೆಗಳ ಅವಧಿ ಮುಗಿದಿದ್ದರೆ, ತಕ್ಷಣ ಅವುಗಳನ್ನು ನವೀಕರಿಸಿಕೊಳ್ಳಬೇಕು. ಫೆಬ್ರವರಿ 1, 2020 ರಿಂದ ಮಾನ್ಯವಾಗಿರುವ ದಾಖಲೆಗಳು ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತವೆ. ಅದರ ನಂತರ ಮಾನ್ಯವಾಗಿರುವುದಿಲ್ಲ.
ನಿಮ್ಮ ಚಾಲನಾ ಪರವಾನಗಿ ಅವಧಿ ಮುಗಿದಿದ್ದರೆ, ಅದನ್ನು ತಕ್ಷಣ ನವೀಕರಿಸಿ. ಪರವಾನಗಿ ಸೇರಿದಂತೆ ಇತರ ದಾಖಲೆಗಳ ಸಿಂಧುತ್ವ ಅವಧಿ ಮುಗಿದಿದ್ದರೂ ಕೂಡಲೇ ಆರ್‌ಸಿಯನ್ನು ನವೀಕರಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ದಂಡವನ್ನು ಭರಿಸಬೇಕಾಗುತ್ತದೆ.