ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಎಲ್ಐಸಿ(LIC) ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಎಲ್ಐಸಿ ಅನೇಕ ರೀತಿಯ ಪಾಲಿಸಿಗಳನ್ನು ನೀಡುತ್ತದೆ. ಮನಿ ಬ್ಯಾಕ್ ಪಾಲಿಸಿಯಿಂದ ಹೆಲ್ತ್ ಪಾಲಿಸಿವರೆಗು ಹೆಚ್ವಿನ ಪಾಲಿಸಿಗಳನ್ನು ನೀಡುತ್ತಿದೆ. ಇವುಗಳಲ್ಲಿ ನಾವು ನಮ್ಮ ಅಗತ್ಯಗಳಿಗೆ ಸೂಕ್ತವಾದ ಪಾಲಿಸಿಗಳನ್ನು ತೆಗೆದುಕೊಳ್ಳಬಹುದು.
ಜೀವನ್ ಅಕ್ಷಯ ಪಾಲಿಯು ಎಲ್‌ಐಸಿ ಪಾಲಿಸಿಗಳಲ್ಲಿ ಒಂದು. ಈ ಪಾಲಿಸಿಯನ್ನು ತೆಗೆದುಕೊಳ್ಳುವವರಿಗೆ ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ. 30 ರಿಂದ 85 ವರ್ಷದೊಳಗಿನ ಜನರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ವರ್ಷಕ್ಕೆ ಕನಿಷ್ಠ 12,000 ರೂ.ಗಳ ಪಿಂಚಣಿ ಪಡೆಯಬಹುದು. ಇದಕ್ಕಾಗಿ ಕನಿಷ್ಠ 1 ಲಕ್ಷ ರೂ.ಗಳಿಗೆ ಪಾಲಿಸಿ ತೆಗೆದುಕೊಳ್ಳಬೇಕು.
ಗರಿಷ್ಠ ಮಿತಿಯಂತಹ ಯಾವುದೇ ಮಿತಿಯಿಲ್ಲ . ಪಾಲಿಸಿಯನ್ನು ಯಾವುದೇ ಮೊತ್ತಕ್ಕಾದರೂ ತೆಗೆದುಕೊಳ್ಳಬಹುದು. ಪಾಲಿಸಿಯನ್ನು ತೆಗೆದುಕೊಂಡ ಮೂರು ತಿಂಗಳಿನಿಂದ ಸಾಲ ಸೌಲಭ್ಯವೂ ಸಿಗುತ್ತದೆ. ಪಾಲಿಸಿದಾರರಿಗೆ 10 ರೀತಿಯ ಆಯ್ಕೆಗಳಿವೆ. ತಮಗೆ ಇಷ್ಟವಾದ ಆಯ್ಕೆಯನ್ನು ಆಯ್ಕೆ ಮಾಡಬಹುದು.
ಉದಾಹರಣೆಗೆ ನಿಮಗೆ 68 ವರ್ಷ. ಪಾಲಿಸಿಯನ್ನು 9 ಲಕ್ಷ ರೂ. ತೆಗೆದುಕೊಂಡಿದ್ದೀರಿ. ಅಂದರೆ ಈ ಹಣವನ್ನು ಒಂದೇ ಬಾರಿಗೆ ಪಾವತಿಸಬೇಕಾಗುತ್ತದೆ. ಈಗ ನಿಮಗೆ ತಿಂಗಳಿಗೆ ಸುಮಾರು 7,000 ರೂ. ಪಿಂಚಣಿ ಸಿಗುತ್ತದೆ. ಇನ್ನು ಪಾಲಿಸಿದಾರರು ಬದುಕಿರುವವರೆಗೂ ಪಿಂಚಣಿ ಮುಂದುವರಿಯುತ್ತದೆ.