Honeymoon Murderer : ಪ್ರೀತಿಗಾಗಿ ಮಧ್ಯಪ್ರದೇಶದ ಯುವತಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಮೇಘಾಲಯ ಮಧುಚ೦ದ್ರ ಪ್ರವಾಸ ಸಮಯದಲ್ಲಿ ಭೀಕರವಾಗಿ ಕೊಲೆ ಮಾಡಿಸಿದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಹನಿಮೂನ್‌ಗೆ೦ದು ಮೇಘಾಲಯದಲ್ಲಿದ್ದಾಗ ರಾಜಾ ರಘುವ೦ಶಿಯನ್ನ ಹತ್ಯೆಗೈದ ಈ ಪ್ರೇಮಿಗಳು ಕೊಲೆಗೆ ಸಂಚು ರೂಪಿಸಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಘಟನೆ?
ಮಧ್ಯಪ್ರದೇಶದ ರಾಜಾ ರಘುವ೦ಶಿ & ಸೋನಮ್ ರಘುವಂಶಿ ಕಳೆದ ಮೇ 11 ರಂದು ಮದುವೆಯಾಗಿದ್ದು, ಮೇ 20 ರ೦ದು ಇಬ್ಬರೂ ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಮೇ 23 ರಂದು ಈ ಜೋಡಿ ಹೋ೦ಸ್ಟೇಯಿ೦ದ ನಾಪತ್ತೆಯಾಗಿದ್ದು, ಜೂನ್ 2 ರಂದು 20 ಕಿ.ಮೀ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಲಪಾತ ಬಳಿ ರಾಜಾ ರಘುವ೦ಶಿ ಶವ ಪತ್ತೆಯಾಯಾಗಿತ್ತು.
ಹೊರಬಿತ್ತು ಕೊಲೆ ರಹಸ್ಯ
ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಸೋನಮ್ ರಘುವಂಶಿ, ಉತ್ತರಪ್ರದೇಶದ ಕಾಶಿ ಢಾಬಾ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಳು. ಈ ಮೂಲಕ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳೂ ಪೊಲೀಸರ ಬಲೆಗೆ ಬಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ರಾಜ್ ಕುಶ್ವಾಹ, ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನ೦ದ್ ಕುರ್ಮಿಯನ್ನು ಬ೦ಧಿಸಿದರು.
ಕೊಲೆ ಸಂಚು
29 ವರ್ಷದ ರಾಜಾ ರಘುವಂಶಿ 24 ವರ್ಷದ ಸೋನಮ್ ಎ೦ಬಾಕೆಯೊಂದಿಗೆ ಮದುವೆಯಾಗಿದ್ದರು. ಆದರೆ ಸೋನಮ್ ಈಗಾಗಲೇ ರಾಜ್ ಕುಶ್ವಾಹ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆ ಬಳಿಕ ಇವರಿಬ್ಬರೂ ಸೇರಿ, ಕೊಲೆ ಸಂಚು ರೂಪಿಸಿದ್ದಾರೆ. ಹನಿಮೂನ್ ಪ್ರವಾಸ ಕೈಗೊಂಡಾಗ, ರಾಜ್ ಕುಶ್ವಾಹ ತನ್ನ ಸಹಚರರಾದ ವಿಶಾಲ್ ಚೌಹಾಣ್, ಆಕಾಶ್ ರಜಪೂತ್ & ಆನಂದ್‌ಕುರ್ಮಿರನ್ನು ಕಳುಹಿಸಿ ರಾಜಾ ರಘುವಂಶಿಯ ಕೊಲೆ ಮಾಡಿಸಿದ್ದಾನೆ.
ಸೋನಮ್-ಕುಶ್ವಾಹ ಸಂಬಂಧ
ಆರಂಭದಲ್ಲೇ ಸೋನಮ್ & ರಾಜ್ ಕುಶ್ವಾಹ ಅವರ ನಡುವಿನ ಸ೦ಬ೦ಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮೇಘಾಲಯ ಪೊಲೀಸರು, ಆಕೆಯ ಮೊಬೈಲ್ ದಾಖಲೆ ಪರಿಶೀಲಿಸಿದಾಗ, ರಾಜ್ ಕುಶ್ವಾಹ ಜೊತೆ ಆಕೆ ಮಾತನಾಡಿರುವ ಸ೦ಗತಿ ಬಯಲಾಗಿದೆ. ರಾಜ್ ಕುಶ್ವಾಹ ಶಿಲ್ಲಾಂಗ್‌ಗೆ ಪ್ರಯಾಣಿಸದಿದ್ದರೂ, ಫೋನ್ ಮೂಲಕ ತನ್ನ ಸಹಚರರಿಗೆ ಸೂಚನೆ ನೀಡುವ ಮೂಲಕ ಇಂದೋರ್‌ನಲ್ಲಿ ಕುಳಿತುಕೊಂಡೇ ಕೊಲೆ ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖತರ್ನಾಕ್ ಲೇಡಿ
ಸೋನಮ್ ತಮ್ಮ ಪ್ರಯಾಣದ ಮಾಹಿತಿ, ತಾವಿರುವ ಸ್ಥಳ ಹೀಗೆ ಎಲ್ಲಾ ಮಾಹಿತಿಯನ್ನು ರಾಜ್ ಕುಶ್ವಾಹಗೆ ರವಾನಿಸಿದ್ದಾಳೆ. ಕೊನೆಯಲ್ಲಿ ವೈಸಾವ್ಹಾಂಗ್ ಜಲಪಾತದ ಬಳಿ ಈ ಆರೋಪಿಗಳು ಸೇರಿಕೊಂಡು ರಾಜಾ ರಘುವಂಶಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ರಾಜಾ ರಘುವಂಶಿ ಅವರ ಶವ ಆಳವಾದ ಕಂದಕದಲ್ಲಿ ಪತ್ತೆಯಾಗಿದ್ದು, ಶವದ ಸಮೀಪ ಕೊಲೆಗೆ ಬಳಸಿದ ಮಚ್ಚು ಕೂಡ ಪತ್ತೆಯಾಗಿದೆ.
ಮುಗ್ಧ ಜೀವ ಬಲಿ
ರಾಜಾ ಅವರ ಮೃತದೇಹ ಪತ್ತೆಯಾಗಿ, ಅಂತಿಮ ವಿಧಿವಿಧಾನಗಳ ಸಮಯದಲ್ಲಿ ಸೋನಮ್ ಅವರ ತ೦ದೆ ದೇವಿ ಸಿಂಗ್ ಪಕ್ಕದಲ್ಲಿ ರಾಜ್ ಕುಶ್ವಾಹ ಕಾಣಿಸಿಕೊಂಡಿದ್ದ. ಇದು ಆತನ ಭೀಕರ ಮಾನಸಿಕತೆಗೆ ಸಾಕ್ಷಿಯಾಗಿದೆ. ಕುಶ್ವಾಹ ಸೋನಮ್ ಅವರ ಕುಟುಂಬದ ಒಡೆತನದ ಪ್ರೈವುಡ್ ಘಟಕದ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಕಾರಣಕ್ಕೆ ಸೋನಮ್ & ಆತನ ನಡುವೆ ಪ್ರೇಮ ಬೆಳೆದಿತ್ತು. ಒಟ್ಟಿನಲ್ಲಿ ಹುಚ್ಚು ಪ್ರೀತಿಗೆ, ಓರ್ವ ಮುಗ್ಧ ವ್ಯಕ್ತಿ ಬಲಿಯಾಗಿದ್ದಾರೆ.