DIGIPIN | ಅಂಚೆ ಇಲಾಖೆ ನೂತನ ವ್ಯವಸ್ಥೆ ನಿಖರ ವಿಳಾಸಕ್ಕೆ ಪಿನ್ ಬದಲು ಡಿಜಿಪಿನ್

DIGIPIN | ಯಾವುದೇ ಒ೦ದು ವಿಳಾಸದ ನಿಖರತೆಗಾಗಿ ಇನ್ನು ಮುಂದೆ ಪಿನ್‌ಕೋಡ್‌ಗಳ ಬದಲು ಡಿಜಿಟಲ್ ವಿಳಾಸವಾದ ಡಿಜಿಪಿನ್( 10 ಅಂಕಿ) ಬಳಸಬಹುದಾಗಿದೆ. ಭಾರತೀಯ ಅಂಚೆ ಇಲಾಖೆ ಈ ನೂತನ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಇದು…

DIGIPIN

DIGIPIN | ಯಾವುದೇ ಒ೦ದು ವಿಳಾಸದ ನಿಖರತೆಗಾಗಿ ಇನ್ನು ಮುಂದೆ ಪಿನ್‌ಕೋಡ್‌ಗಳ ಬದಲು ಡಿಜಿಟಲ್ ವಿಳಾಸವಾದ ಡಿಜಿಪಿನ್( 10 ಅಂಕಿ) ಬಳಸಬಹುದಾಗಿದೆ. ಭಾರತೀಯ ಅಂಚೆ ಇಲಾಖೆ ಈ ನೂತನ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಇದು ಯಾವುದೇ ಮನೆ ಅಥವಾ ಕಟ್ಟಡದ ನಿಖರವಾದ ವಿಳಾಸವನ್ನು ನೀಡಲಿದೆ. ಈ ವ್ಯವಸ್ಥೆಯು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಹೇಗೆ ಉಪಯುಕ್ತವಾಗಲಿದೆ ಎನ್ನುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಸಾಂಪ್ರದಾಯಿಕ ಪಿನ್ ಕೋಡ್ ఇల్ల

ಭಾರತೀಯ ಅಂಚೆ ಇಲಾಖೆಯು ‘ಡಿಜಿಪಿನ್’ ಎಂಬ ಹೊಸ ಡಿಜಿಟಲ್ ವಿಳಾಸವನ್ನು ಪರಿಚಯಿಸಿದೆ ಮತ್ತು ಅದನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ಇಡೀ ಪ್ರದೇಶವನ್ನು ಸೂಚಿಸಲು ಸಾಂಪ್ರದಾಯಿಕ ಪಿನ್ ಕೋಡ್ ಬಳಸುವಲ್ಲಿ, ಡಿಜಿಪಿನ್ ಮನೆ ಅಥವಾ ಕಚೇರಿಯ ನಿಖರವಾದ ಸ್ಥಳವನ್ನು ಗುರುತಿಸುತ್ತದೆ. ಇದರಿಂದಾಗಿ, ವಿಳಾಸದ ನಿಖರತೆ ಹೆಚ್ಚಾಗುತ್ತದೆ.

10-ಅಂಕಿಯ ಡಿಜಿಟಲ್ ಕೋಡ್

ಡಿಜಿಪಿನ್ ವ್ಯವಸ್ಥೆಯು 10-ಅಂಕಿಯ ಡಿಜಿಟಲ್ ಕೋಡ್ ರೂಪದಲ್ಲಿದೆ. ಇದು ನಾಲ್ಕು ಮೀಟ‌ರ್ ವ್ಯಾಪ್ತಿಯೊಳಗೆ ನಿಖರವಾದ ಸ್ಥಳವನ್ನು ಸೂಚಿಸುತ್ತದೆ. ಇದು ಪತ್ರವ್ಯವಹಾರ ಸರಿಯಾದ ವಿಳಾಸವನ್ನು ತಲುಪಲು ಸಹಾಯ ಮಾಡುತ್ತದೆ. ಈ ಹಿಂದಿನ ಸಾಂಪ್ರದಾಯಿಕ ಪಿನ್‌ಕೋಡ್‌ಗಳ ವ್ಯಾಪ್ತಿ ಹೆಚ್ಚು ಇರುವುದರಿ೦ದ ಒ೦ದು ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗುತ್ತಿತ್ತು.

Vijayaprabha Mobile App free

ತುರ್ತು ಸೇವೆಗಳಿಗೆ ಉಪಯುಕ್ತ

ಈ ಡಿಜಿಪಿನ್ ಬಳಕೆಯಿಂದಾಗಿ ಆನ್‌ಲೈನ್ ಡೆಲಿವರಿಗಳಲ್ಲಿ, ತುರ್ತು ಸೇವೆಗಳಾದ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇವೆಗಳು ಸರಿಯಾದ ಸ್ಥಳವನ್ನು ತಲುಪಲು ಉಪಯುಕ್ತವಾಗಲಿದೆ. ವಿಶೇಷವಾಗಿ ಗ್ರಾಮೀಣ & ದೂರದ ಪ್ರದೇಶಗಳಲ್ಲಿ ಇದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎ೦ದು ನಿರೀಕ್ಷಿಸಲಾಗಿದೆ.

ಗೇಮ್ ಚೇಂಜ‌ರ್

ಡಿಜಿಪಿನ್‌ನ ಬಳಕೆಯು ಪತ್ರವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಇ-ಕಾಮರ್ಸ್ ಪಾರ್ಸೆಲ್‌ಗಳಿಗೂ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಇದು ಗ್ರಾಹಕರು ತಮ್ಮ ಆರ್ಡ‌್ರಗಳನ್ನು ಸಮಯಕ್ಕೆ & ಸರಿಯಾದ ವಿಳಾಸದಲ್ಲಿ ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

ಡಿಜಿಪಿನ್ ಹೇಗೆ ಕಂಡುಹಿಡಿಯುವುದು?

ನಿಮ್ಮಡಿಜಿಪಿನ್ ಪಡೆಯಲು ಭಾರತ ಸರ್ಕಾರದ https://dac.indiapost.gov.in/mydigip-in/home ವೆಬ್‌ಸೈಟ್‌ಗೆ ಹೋಗಿ, ನಿಮ್ಮ ಸ್ಥಳ ಆಯ್ಕೆ ಮಾಡಿ & 10-ಅಂಕಿಯ ಕೋಡ್ ಪಡೆಯಿರಿ. ಈ ವ್ಯವಸ್ಥೆಯನ್ನು IIT ಹೈದರಾಬಾದ್, NRSC & ISRO ಸಹಯೋಗದೊಂದಿದೆ ಅಭಿವೃದ್ಧಿಪಡಿಸಲಾಗಿದೆ & ಆಫ್‌ಲೈನ್ ಬಳಕೆಯ ಆಯ್ಕೆಯೂ ಲಭ್ಯವಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.