ಭೂಪಾಲ್ : ಕಾನೂನು(Law) ಓದುತ್ತಿರುವ 21 ವರ್ಷದ ಆ ಯುವತಿ ತನ್ನ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗಿದ್ದಳು. ಆಕೆಯ ಗೆಳೆಯ ಕೂಡ ಗುಂಪಿನಲ್ಲಿದ್ದ. ಆ ಪ್ರವಾಸವನ್ನು ತುಂಬಾ ಆನಂದಿಸಿದ್ದರು. ಆದರೆ,ಹೋಟೆಲ್ ಹತ್ತಿರ ಊಟಕ್ಕೆಂದು ನಿಲ್ಲಿಸಿದಾಗ ಆ ಯುವತಿ ಪೆನ್ ಡ್ರೈವ್ ಕಳೆದುಕೊಂಡಿದ್ದಳು. ಅದು ಇನ್ನೊಬ್ಬ ವ್ಯಕ್ತಿಗೆ ಸಿಕ್ಕಿದೆ. ದುರದೃಷ್ಟವಶಾತ್ ಅವಳ ಫೋನ್ ನಂಬರ್ ಕೂಡ ಅದರಲ್ಲಿತ್ತು. ಇನ್ನೇನು ಬೇಕು ಆ ವ್ಯಕ್ತಿ ತನ್ನ ಆಟವನ್ನು ಪ್ರಾರಂಭಿಸಿದನು. ಕಿರುಕುಳವನ್ನು ಸಹಿಸಲಾಗದೆ ಸಂತ್ರಸ್ತೆ ತನ್ನ ಗೆಳೆಯನ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದು, ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ತನ್ನ ಗೆಳೆಯನೊಂದಿಗೆ ಆತ್ಮೀಯಯವಾಗಿ ತಿರುಗಿ ತೆಗೆಸಿಕೊಂಡ ಫೋಟೋಗಳನ್ನು ತನ್ನ ಪೆನ್ ಡ್ರೈವ್‌ನಲ್ಲಿ ಆ ಯುವತಿ ಸಂಗ್ರಹಿಸಿದ್ದಳು. ಒಂದು ಸ್ಕ್ರೀನ್ ಶಾಟ್ ಫೋಟೋದಲ್ಲಿ ಆಕೆಯ ಫೋನ್ ಸಂಖ್ಯೆ ಕೂಡ ಇದೆ. ದೂರವಾಣಿ ಸಂಖ್ಯೆಗೆ ಡಯಲ್ ಮಾಡಿದ ಆರೋಪಿ ಆ ಯುವತಿಗೆ 5 ಲಕ್ಷ ರೂ. ನೀಡಬೇಕು ಇಲ್ಲದಿದ್ದರೆ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನು.
ಆರೋಪಿ ಆ ಯುವತಿಗೆ ಬೆದರಿಕೆ ಹಾಕಿ ತನ್ನ ಗೆಳೆಯನ ಸಂಖ್ಯೆಯನ್ನು ತೆಗೆದುಕೊಂಡಿದ್ದಾನೆ.ಆತನಿಗೆ ಕೂಡ ಕರೆ ಮಾಡಿ ಬೆದರಿಕೆ ಹಾಕಿದ್ದ. ಇಬ್ಬರು ಸೇರಿ ಐದು ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ಬೆದರಿಕೆ ಹಾಕಿದ್ದನು. ಪದೇ ಪದೇ ಬೆದರಿಕೆ ಕರೆಗಳಿಂದ ಹುಡುಗಿ ನಿರಾಶೆಗೊಂಡಿದ್ದಳು. ಏನು ಮಾಡಲು ಸಾಧ್ಯವಾಗದೆ ಆಕೆಯ ಗೆಳೆಯ ಪೊಲೀಸರನ್ನು ಆಶ್ರಯಿಸಿದ್ದಾನೆ.
ಆ ಯುವಕ ನೀಡಿದ ದೂರವಾಣಿ ಸಂಖ್ಯೆಯನ್ನು ಆಧರಿಸಿ ಅಪರಾಧಿಯನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಶೀಘ್ರದಲ್ಲೇ ಅವನನ್ನು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.
ದೂರು ನೀಡಿದ ಯುವಕ ತನ್ನ ಗೆಳತಿ ಮತ್ತು ಕೆಲವು ಸ್ನೇಹಿತರೊಂದಿಗೆ ಜನವರಿ 4 ರಂದು ಮಥುರಾ ಮೂಲಕ ದೆಹಲಿಗೆ ಹೋಗಿದ್ದರು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಸಂಜೀವ್ ಚೌಕ್ಸಿ ಹೇಳಿದ್ದಾರೆ. ಮಥುರಾ ಹೆದ್ದಾರಿಯಲ್ಲಿರುವ ಹೋಟೆಲ್‌ನಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವಾಗ, ಯುವತಿ ತನ್ನ ಬ್ಯಾಗ್‌ನಲ್ಲಿದ್ದ ಪೆನ್ ಡ್ರೈವ್ ಕಳೆದು ಹೋಗಿದೆ ಎಂದು ಬಹಿರಂಗಪಡಿಸಿದ್ದಾಳೆ. ಜನವರಿ 15 ರಿಂದ ಆ ಯುವತಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: “ಆ” ಆಸೆ ಒಬ್ಬ ವ್ಯಕ್ತಿಯ ಪ್ರಾಣ ತೆಗೆದುಕೊಂಡಿತು; ಮರಣೋತ್ತರ ವರದಿಯಲ್ಲಿ ವೈದ್ಯರು ಹೇಳಿದ್ದೇನು ಗೊತ್ತೇ?




