ತೆಲಂಗಾಣ: ಶಾಲೆಗೆ ತೆರಳಿದ್ದ ಬಾಲಕನೋರ್ವ ಮಧ್ಯಾಹ್ನ ಪೂರಿ ತಿಂದು ಸಾವನ್ನಪ್ಪಿದ ಧಾರುಣ ಘಟನೆ ಸಿಕಂದರಾಬಾದ್‌ನಲ್ಲಿ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ವಿಕಾಸ್ ಮೃತ ಬಾಲಕನಾಗಿದ್ದಾನೆ.
ಬಾಲಕನ ತಾಯಿ ಮಧ್ಯಾಹ್ನ ಊಟಕ್ಕೆಂದು ಟಿಫಿನ್‌ಗೆ ಪೂರಿ ಹಾಕಿ ಕಳುಹಿಸಿದ್ದಾಳೆ. ಶಾಲೆಗೆ ತೆರಳಿದ್ದ ಬಾಲಕ ಊಟದ ವೇಳೆಯಲ್ಲಿ ಮನೆಯಿಂದ ಕೊಟ್ಟಿದ್ದ ಮೂರೂ ಪೂರಿಗಳನ್ನು ಒಟ್ಟಿಗೆ ಬಾಯಿಗೆ ಹಾಕಿಕೊಂಡಿದ್ದಾನೆ. ಪರಿಣಾಮ ಉಸಿರಾಡಲಾಗದೇ ಬಾಲಕ ವಿಕಾಸ್ ಏಕಾಏಕಿ ಕುಸಿದುಬಿದ್ದಿದ್ದಾನೆ.
ಕೂಡಲೇ ಶಾಲೆಯ ಶಿಕ್ಷಕರು ವಿದ್ಯಾರ್ಥಿಯನ್ನು ಎಚ್ಚರಿಸಲು ಪ್ರಯತ್ನಿಸಿದರಾದರೂ ಬಾಲಕ ಎಚ್ಚರಗೊಂಡಿಲ್ಲ. ಕೂಡಲೇ ಆತನನ್ನು ಶಾಲೆಯ ಶಿಕ್ಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ ಬಾಲಕ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾನೆ.
ಬಳಿಕ ಶಾಲೆಯವರು ಮನೆಯವರಿಗೆ ಕರೆ ಮಾಡಿ ಬಾಲಕ ಪೂರಿ ತಿನ್ನುವ ಸಾವನ್ನಪ್ಪಿದ್ದಾಗಿ ಮಾಹಿತಿ ನೀಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.