ಇಂದು BCCI ಟೀಂ ಇಂಡಿಯಾ ಆಟಗಾರರ ಜೊತೆಗಿನ ವಾರ್ಷಿಕ ಕೇಂದ್ರ ಗುತ್ತಿಗೆ ಒಪ್ಪಂದದ ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ.
ಹೌದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಭಾರತೀಯ ಪುರುಷರ ತಂಡಕ್ಕೆ 2024-25ರ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರು ಎ+ ದರ್ಜೆಯನ್ನು ಉಳಿಸಿಕೊಂಡಿದ್ದಾರೆ.
ಇನ್ನು, ಕಳೆದ ಸಾಲಿನ ಒಪ್ಪಂದದಿಂದ ಕೈ ಬಿಡಲಾಗಿದ್ದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸಾಲಿನ BCCIನ ಕೇಂದ್ರ ಒಪ್ಪಂದದಲ್ಲಿ 30 ಆಟಗಾರರಿಗೆ ಮಾತ್ರ ಸ್ಥಾನ ನೀಡಿತ್ತು. ಇನ್ನು ಈ ಪಟ್ಟಿಯಲ್ಲಿನ 34 ಆಟಗಾರರನ್ನು 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ.
ನೀಡಲಾದ ಒಪ್ಪಂದಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಗ್ರೇಡ್
ಆಟಗಾರರು A+
- ರೋಹಿತ್ ಶರ್ಮಾ
- ವಿರಾಟ್ ಕೊಹ್ಲಿ
- ಜಸ್ಪ್ರೀತ್ ಬುಮ್ರಾ
- ರವೀಂದ್ರ ಜಡೇಜಾ
ಆಟಗಾರರು GRADE A
- ಎಂಡಿ ಸಿರಾಜ್
- ಕೆಎಲ್ ರಾಹುಲ್
- ಶುಭಮನ್ ಗಿಲ್
- ಹಾರ್ದಿಕ್ ಪಾಂಡ್ಯ
- Md. ಶಮಿ
- ರಿಷಬ್ ಪಂತ್
ಆಟಗಾರರು GRADE B
- ಸೂರ್ಯಕುಮಾರ್ ಯಾದವ್
- ಕುಲದೀಪ್ ಯಾದವ್
- ಅಕ್ಷರ್ ಪಟೇಲ್
- ಯಶಸ್ವಿ ಜೈಸ್ವಾಲ್
- ಶ್ರೇಯಸ್ ಅಯ್ಯರ್
ಆಟಗಾರರು GRADE C
- ರಿಂಕು ಸಿಂಗ್
- ತಿಲಕ್ ವರ್ಮಾ
- ರುತುರಾಜ್ ಗಾಯಕವಾಡ
- ಶಿವಂ ದುಬೆ
- ರವಿ ಬಿಷ್ಣೋಯಿ
- ವಾಷಿಂಗ್ಟನ್ ಸುಂದರ್
- ಮುಖೇಶ್ ಕುಮಾರ್
- ಸಂಜು ಸ್ಯಾಮ್ಸನ್
- ಅರ್ಷದೀಪ್ ಸಿಂಗ್
- ಪ್ರಸಿದ್ಧ್ ಕೃಷ್ಣ
- ರಜತ್ ಪಾಟಿದಾರ್
- ಧ್ರುವ್ ಜುರೆಲ್
- ಸರ್ಫರಾಜ್ ಖಾನ್
- ನಿತೀಶ್ ಕುಮಾರ್ ರೆಡ್ಡಿ
- ಇಶಾನ್ ಕಿಶನ್
- ಅಭಿಷೇಕ್ ಶರ್ಮಾ
- ಆಕಾಶ್ ದೀಪ್
- ವರುಣ್ ಚಕ್ರವರ್ತಿ
- ಹರ್ಷಿತ್ ರಾಣ