ಚೆನ್ನೈ: ದೇಶದಲ್ಲಿ ರೂಪಾಂತರ ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಇಂದು 9, 10, 11ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ವಿದ್ಯಾರ್ಥಿಗಳ ಅರೋಗ್ಯ ಸುರಕ್ಷತೆ ಹಿನ್ನಲೆ 9, 10, 11ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು, ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಸೇರಬಹುದಾಗಿದೆ. ಇದೇ ರೀತಿಯ ನಿರ್ಧಾರವನ್ನು ಕರ್ನಾಟಕದಲ್ಲೂ ಕೈಗೊಂಡರೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಆದರೆ 10ನೇ ತರಗತಿ ಪರೀಕ್ಷೆ ಮುಖ್ಯ ಘಟ್ಟವಾದ್ದರಿಂದ ಕರ್ನಾಟಕದಲ್ಲಿ ಇಂತಹ ತೀರ್ಮಾನ ಅನುಮಾನ ಎನ್ನಲಾಗುತ್ತಿದೆ.
ಇದನ್ನು ಓದಿ: ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು; ಶ್ರೀಮಂತರಿಗೆ ಮೀಸಲಾತಿ ಮುಂದುವರೆಯುತ್ತಿರುವುದು ದುರ್ದೈವ