ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬಜೆಟ್ ಮಂಡಿಸುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಹಿಳೆಯರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರಿಗೆ 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆಯನ್ನು ಘೋಷಿಸಿದ್ದಾರೆ. ಇಷ್ಟೇ ಅಲ್ಲದೆ, ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ 2.5 ಕೋಟಿ ರೂಪಾಯಿ ಅನುದಾನ. ಮಹಿಳಾ ಉದ್ಯಮಿಗಳಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ 2 ಕೋಟಿ ರೂ.ವರೆಗೆ ಸಾಲ ನೀಡುವುದಾಗಿ ಘೋಷಿಸಿದ್ದಾರೆ.
ಮಹಿಳೆಯರಿಗೆ ಸಿಎಂರಿಂದ ವಿಶೇಷ ಕೊಡುಗೆ:
ಇನ್ನು ಸಿಎಂ ಯಡಿಯೂರಪ್ಪ ಅವರು ಜಿಲ್ಲಾ ಕೇಂದ್ರಗಳಲ್ಲಿ ತಲಾ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ. 60,000 ಮಹಿಳೆಯರಿಗೆ ಉದ್ಯೋಗ
ಮಹಿಳಾ ಉದ್ಯಮಿಗಳಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ 2 ಕೋಟಿ ರೂ.ವರೆಗೆ ಸಾಲ,
ನಿರ್ಭಯಾ ಯೋಜನೆಯಡಿ ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರಿನೆಲ್ಲೆಡೆ 7,500 ಸಿಸಿ ಕ್ಯಾಮರಾ ಅಳವಡಿಕೆ,
ಹಪ್ಪಳ, ಉಪ್ಪಿನ ಕಾಯಿ ತಯಾರಿಸುವವರಿಗೂ ಆನ್ ಲೈನ್ ಮಾರುಕಟ್ಟೆ ಒದಗಿಸಿ, ವನಿತಾ ಸಂಗಾತಿ ಹೆಸರಿನಲ್ಲಿ ಮಹಿಳೆಯರಿಗೆ ರಿಯಾಯಿತಿಯ ಬಿಎಂಟಿಸಿ ಪಾಸ್ ವಿತರಣೆ.